Advertisement
9ನೇ ಶ್ರೇಯಾಂಕದ 25ರ ಹರೆಯದ ಕೊಂಟಾ ರಶ್ಯದ 30ನೇ ಶ್ರೇಯಾಂಕದ ಏಕತೆರಿನಾ ಮಕರೋವಾ ಅವರನ್ನು 6-1, 6-4 ಸೆಟ್‌ಗಳಿಂದ ಸೋಲಿಸಿ ಅಂತಿಮ ಎಂಟರ ಸುತ್ತಿಗೇರಿದರು. ಕೊಂಟಾ ಸತತ ಎರಡನೇ ವರ್ಷ ಇಲ್ಲಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಕೊಂಟಾ ಎಲ್ಲರಿಗೂ ಅಪರಿಚಿತರಾಗಿದ್ದರು. ಆದರೆ ಕ್ವಾರ್ಟರ್‌ಫೈನಲಿಗೇರುವ ಮೂಲಕ ತನ್ನ ಪರಿಚಯ ಮಾಡಿಕೊಟ್ಟಿದ್ದ ಕೊಂಟಾ ಈ ಬಾರಿಯೂ ಅಂತಿಮ ಎಂಟರ ಸುತ್ತಿಗೇರಿ ಗಮನ ಸೆಳೆದಿದ್ದಾರೆ.
ಕ್ರೊವೇಶಿಯದ ಮಿರ್ಜಾನಾ ಲೂಸಿಕ್ ಬರೋನಿ ಅಮೆರಿಕದ ಅರ್ಹತಾ ಆಟಗಾರ್ತಿ ಜೆನ್ನಿಫರ್ ಬ್ರ್ಯಾಡಿ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ 18 ವರ್ಷಗಳ ಬಳಿಕ ಗ್ರ್ಯಾನ್ ಸ್ಲಾಮ್ ಕೂಟದ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದ್ದಾರೆ. ಪ್ಲಿಸ್ಕೋವಾ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯದ ದರಿಯಾ ಗಾವ್ರಿಲೋವಾರನ್ನು 6-3, 6-3 ಸೆಟ್‌ಗಳಿಂದ ಉರುಳಿಸಿದ್ದರು.
Related Articles
Advertisement
ಪೇಸ್-ಹಿಂಗಿಸ್ ಕ್ವಾರ್ಟರ್ ಫೈನಲಿಗೆಮೆಲ್ಬರ್ನ್: ಭಾರತದ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಅವರು ಸುಲಭ ಜಯದೊಂದಿಗೆ ಆಸ್ಟ್ರೇಲಿಯನ್ ಓಪನ್‌ನ ಮಿಕ್ಸೆಡ್ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಪೇಸ್ ಮತ್ತು ಹಿಂಗಿಸ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಕ್ಯಾಸೆ ಡೆಲ್ಲಾಕ್ವಾ ಮತ್ತು ಮ್ಯಾಟ್ ರೈಡ್ ಅವರನ್ನು 6-2, 6-3 ಸೆಟ್‌ಗಳಿಂದ ಉರುಳಿಸಿದರು. ಪೇಸ್-ಹಿಂಗಿಸ್ ಮೊದಲ ಸುತ್ತಿನಲ್ಲೂ ಆಸ್ಟ್ರೇಲಿಯದ ಜೋಡಿಯನ್ನು ಕೆಡಹಿದ್ದರು. ಸ್ಟ್ರೈಕೋವಾ ವಿರುದ್ಧ ಜಯ
ಕೊಂಟಾ ಅವರ ಕ್ವಾರ್ಟರ್‌ಫೈನಲ್ ಎದುರಾಳಿ ಸೆರೆನಾ ವಿಲಿಯಮ್ಸ್ ಅವರು ತನ್ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬಾಬೋìರಾ ಸ್ಟ್ರೈಕೋವಾ ಅವರನ್ನು ಕಠಿನ ಹೋರಾಟದಲ್ಲಿ 7-5, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ಇದೊಂದು ಕಠಿನ ಪಂದ್ಯವಾಗಿತ್ತು. ಆಕೆ ಉತ್ತಮ ಆಟಗಾರ್ತಿ ಮತ್ತು ಏನು ಬೇಕಾದರೂ ಮಾಡಬಹುದು ಎಂದು ಸೆರೆನಾ ತಿಳಿಸಿದರು. ಆ್ಯಂಜೆಲಿಕ್ ಕೆರ್ಬರ್ ಪತನ ಗೊಂಡ ಕಾರಣ ಸೆರೆನಾ ಕಣದಲ್ಲಿ ಉಳಿದ ಗರಿಷ್ಠ ರ್‍ಯಾಂಕಿನ ಆಟಗಾರ್ತಿ ಆಗಿದ್ದಾರೆ.