Advertisement

36ರ ಹರೆಯ ಸೆರೆನಾ ವಿಲಿಯಮ್ಸ್‌ ಗೆ ಹೆಣ್ಣು ಮಗು ಜನನ

11:37 AM Sep 02, 2017 | Team Udayavani |

ಫ್ಲೋರಿಡಾ : ಟೆನಿಸ್‌ ಸೂಪರ್‌ ಸ್ಟಾರ್‌ ಸೆರೆನಾ ವಿಲಿಯಮ್ಸ್‌ ನಿನ್ನೆ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಸೆರೆನಾ ಮಾತ್ರವಲ್ಲದೆ ವಿಶ್ವಾದ್ಯಂತದ ಆಕೆಯ ಸಹ-ವೃತ್ತಿಪರರು ಮತ್ತು ಅಭಿಮಾನಗಳು ಈ ಸುದ್ದಿಯನ್ನು ಕೇಳಿ ಆನಂದ ತುಂದಿಲರಾಗಿದ್ದಾರೆ.

Advertisement

ಸೆರೆನಾ ವಿಲಿಯಮ್ಸ್‌ ಗೆ ಇದೇ ತಿಂಗಳಲ್ಲಿ 36ರ ಹರೆಯ ತುಂಬಲಿದೆ. ಫ್ಲೋರಿಡಾದ ವೆಸ್ಟ್‌ ಪಾಮ್‌ ಬೀಚ್‌ ನಲ್ಲಿರುವ ಸೈಂಟ್‌ ಮೇರೀಸ್‌ ಮೆಡಿಕಲ್‌ ಸೆಂಟರ್‌ಗೆ ಆಕೆಯನ್ನು ನಿನ್ನೆ ಶುಕ್ರವಾರ ಹೆರಿಗೆಗಾಗಿ ಸೇರಿಸಲಾಗಿತ್ತು.  ಸೆರೆನಾ ಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ಆಕೆಯ ಪ್ರತಿನಿಧಿಗಳಿಂದ ಇನ್ನಷ್ಟೇ ಅಧಿಕೃತ ಹೇಳಿಕೆ ಹೊರಬೀಳಬೇಕಾಗಿದೆ. 

ಸೆರೆನಾ ಳ ಅಕ್ಕ ವೀನಸ್‌ ವಿಲಿಯಮ್ಸ್‌ ತನ್ನ ತಂಗಿಗೆ ಹೆಣ್ಣು ಮಗು ಜನಿಸಿರುವುದನ್ನು ಅತ್ಯಂತ ಸಂಭ್ರಮೋಲ್ಲಾಸದಿಂದ ಸ್ವಾಗತಿಸಿದ್ದಾಳೆ. ತಾನು super excited ಆಗಿದ್ದೇನೆ ಎಂದಾಕೆ ಹೇಳಿದ್ದಾಳೆ. 

ನ್ಯೂಯಾರ್ಕ್‌ನಲ್ಲೀಗ ಸಾಗುತ್ತಿರುವ ಯುಎಸ್‌ ಓಪನ್‌ ಮಹಿಳಾ ವಿಭಾಗದ ಮೂರನೇ ಸುತ್ತಿನ ಆಟದಲ್ಲಿ ಭಾಗಿಯಾಗಿರುವ ನಡುವೆಯೇ ವೀನಸ್‌ ವಿಲಿಯಮ್ಸ್‌ಗೆ ತನ್ನ ತಂಗಿ ಹೆಣ್ಣು ಮಗು ಹೆತ್ತಿರುವ ವಿಷಯ ಮಾಧ್ಯಮದ ಮೂಲಕ ಗೊತ್ತಾಗಿದೆ. “ನನಗೆ ತುಂಬ ಖುಷಿಯಾಗಿದೆ’ ಎಂದಷ್ಟೇ ಹೇಳಿದ ಆಕೆ ತನ್ನ ಆಟದ ಮೇಲೆ ಕೇಂದ್ರೀಕೃತವಾಗಿರುವ ತನ್ನ ಮನಸ್ಸನ್ನು ಇತರೆಡೆ ಹರಿಯ ಬಿಡದಿರುವ ಕಾರಣಕ್ಕೆ ಸುದ್ದಿಗಾರರ ಯಾವುದೇ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next