Advertisement

ಅಂಕಣ ಹಾಳು: ಸೆರೆನಾಗೆ ಹತ್ತು ಸಾವಿರ ಡಾಲರ್‌ ದಂಡ

09:14 AM Jul 11, 2019 | sudhir |

ಲಂಡನ್‌: ವಿಶ್ವವಿಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯ ಮ್ಸ್‌ಗೆ ಆಲ್ ಇಂಗ್ಲೆಂಡ್‌ ಕ್ಲಬ್‌ 10 ಸಾ. ಡಾಲರ್‌ (6.85 ಲಕ್ಷ ರೂ.) ದಂಡ ವಿಧಿಸಿದೆ. ವಿಂಬಲ್ಡನ್‌ ಪ್ರಾರಂಭಕ್ಕೆ ಮೊದಲು ರ್ಯಾಕೆಟ್ ಬೀಸಿ, ಅಂಕಣವನ್ನು ಹಾಳು ಮಾಡಿದ್ದಾರೆಂಬ ಹಿನ್ನೆಲೆಯಲ್ಲಿ ಸೆರೆನಾಗೆ ಈ ಶಿಕ್ಷೆ ವಿಧಿಸಲಾಗಿದೆ. ನಿರ್ದಿಷ್ಟವಾಗಿ ಯಾವ ತಪ್ಪು ಮಾಡಿ ದ್ದಾರೆಂದು ತಿಳಿದುಬಂದಿಲ್ಲ.

Advertisement

ಕೆಲವು ದಿನಗಳ ಹಿಂದೆ ಪುರುಷರ ಸಿಂಗಲ್ಸ್ ಆಟಗಾರ ಬೆರ್ನಾರ್ಡ್‌ ಟಾಮಿಕ್‌ ಅವರಿಗೆ ವಿಶೇಷ ಕಾರಣಕ್ಕೆ ಸಂಘಟಕರು ಭಾರೀ ದಂಡ ವಿಧಿಸಿದ್ದರು. ಅವರು ತಮ್ಮ ಸಾಮರ್ಥ್ಯಕ್ಕೂ ಕಡಿಮೆಯಾಗಿ ಆಡಿ ಸೋಲು ಅನುಭವಿಸಿದ್ದಾರೆ ಎಂದು ಭಾರೀ ದಂಡ ವಿಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next