Advertisement

ಮಯಾಮಿ ಓಪನ್‌’ಟೆನಿಸ್‌ ಪಂದ್ಯಾವಳಿಯಿಂದ ಹಿಂದೆ ಸರಿದ ಸೆರೆನಾ

11:40 PM Mar 22, 2021 | Team Udayavani |

ನ್ಯೂಯಾರ್ಕ್: ಸೋಮವಾರದಿಂದ ಮೊದಲ್ಗೊಂಡ “ಮಯಾಮಿ ಓಪನ್‌’ ಟೆನಿಸ್‌ ಪಂದ್ಯಾವಳಿಯಿಂದ ಸೆರೆನಾ ವಿಲಿಯಮ್ಸ್‌ ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ನಡೆದ ಬಾಯಿಯ ಶಸ್ತ್ರಚಿಕಿತ್ಸೆಯಿಂದಾಗಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂಬುದಾಗಿ ಅವರು ಹೇಳಿದ್ದಾರೆ.

Advertisement

“ಮಯಾಮಿ ಟೂರ್ನಿ ನನ್ನ ಪಾಲಿಗೆ ಯಾವತ್ತೂ ಸ್ಪೆಷಲ್‌. ಕಾರಣ, ಇದು ನನ್ನ ಮನೆಯಂಗಳದ ಪಂದ್ಯಾವಳಿ. ತವರಿನ ಅಭಿಮಾನಿಗಳನ್ನು ಕಾಣಲಾಗದು ಎಂಬ ಬೇಸರವಿದೆ’ ಎಂಬುದಾಗಿ ಸೆರೆನಾ ಹೇಳಿದ್ದಾರೆ.

ದಾಖಲೆ 8 ಸಲ ಮಯಾಮಿ ಓಪನ್‌ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಇವರದಾಗಿದೆ. ನೊವಾಕ್‌ ಜೊಕೋವಿಕ್‌, ರಫೆಲ್‌ ನಡಾಲ್‌, ಫೆಡರರ್‌ ಮೊದಲಾದ ಪ್ರಮುಖ ಟೆನಿಸಿಗರೂ ಇಲ್ಲಿ ಆಡುತ್ತಿಲ್ಲ.

ಇದನ್ನೂ ಓದಿ :ಮೊದಲ ಟೆಸ್ಟ್‌ ಪಂದ್ಯ : ಹೋಲ್ಡರ್‌ ದಾಳಿಗೆ ಕುಸಿದ ಲಂಕಾ

Advertisement

Udayavani is now on Telegram. Click here to join our channel and stay updated with the latest news.

Next