Advertisement

ಇಂಡಿಯನ್‌ ವೆಲ್ಸ್‌ ಟೆನಿಸ್‌ ತೃತೀಯ ಸುತ್ತಿಗೆ ಸೆರೆನಾ

12:30 AM Mar 10, 2019 | |

ಇಂಡಿಯನ್‌ ವೆಲ್ಸ್‌: ವಿಕ್ಟೋರಿಯ ಅಜರೆಂಕಾ ವಿರುದ್ಧ ಗೆಲುವು ದಾಖಲಿಸುವ ಮೂಲಕ ಆಮೆರಿಕದ ಸೆರೆನಾ ವಿಲಿಯಮ್ಸ್‌ “ಇಂಡಿಯನ್‌ ವೆಲ್ಸ್‌’ ಟೆನಿಸ್‌ ಕೂಟದ ತೃತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

Advertisement

ಶನಿವಾರ ನಡೆದ ಪಂದ್ಯದಲ್ಲಿ 10ನೇ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್‌ ಬಲೆರೂಸ್‌ನ ಅಜರೆಂಕಾ ಅವರನ್ನು 7-5, 6-3 ನೇರ ಸೆಟ್‌ಗಳಿಂದ ಸೋಲಿಸಿದರು. ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಸೋಲಿನ ಬಳಿಕ ಮೊದಲ ಕೂಟದಲ್ಲಿ ಆಡುತ್ತಿರುವ ಸೆರೆನಾ ಅವರು ದೀರ್ಘ‌ಕಾಲದ ಪ್ರತಿಸ್ಪರ್ಧಿ ಅಜರೆಂಕಾ ಅವರನ್ನು ಸೋಲಿಸಲು 2 ಗಂಟೆ 7 ನಿಮಿಷ ತೆಗೆದುಕೊಂಡರು.

ಮುಂದಿನ ಪಂದ್ಯದಲ್ಲಿ ಸೆರೆನಾ ಮತ್ತೋರ್ವ ಮಾಜಿ ವಿಶ್ವ ನಂ. ವನ್‌, ಸ್ಪೇನ್‌ ಗಾರ್ಬಿನ್‌ ಮುಗುರುಜಾ ಅವರನ್ನು ಎದುರಿಸಲಿದ್ದಾರೆ. ಮುಗುರುಜಾ ಅಮೆರಿಕಾದ ಲಾರೆನ್‌ ಡೇವಿಸ್‌ ಅವರ ವಿರುದ್ಧ 6-1, 6-3 ಸೆಟ್‌ಗಳಿಂದ ಗೆಲುವು ದಾಖಲಿಸಿದರು.

ಉಳಿದಂತೆ ರೊಮೇನಿಯಾದ ಸಿಮೋನಾ ಹಾಲೆಪ್‌, ಎಲಿನಾ ಸ್ವಿಟೋಲಿನಾ, ಕಿಕಿ ಬರ್ಟೆನ್ಸ್‌ ಮೊದಲಾದವರು ಜಯ ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next