Advertisement

ಸೆ.22; ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಸಹಸ್ರ ಮೋದಕ ಹವನ

04:59 PM Sep 21, 2023 | Team Udayavani |

ಕೋಟ : ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್‌ಪ್ರತಿಷ್ಠಾ ದಶಮಾನೋತ್ಸವದ ಸುಸಂದರ್ಭದಲ್ಲಿ ಇಷ್ಟದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬಂದಿರುವ ಈ ಗಣೇಶೋತ್ಸವದ ಪರ್ವ ಕಾಲದಲ್ಲಿ ಇಷ್ಟದೇವರ ಸಂಪ್ರೀತಿ ಹಾಗೂ ಮಹಾಗಣಪತಿಯ ಪರಿಪೂರ್ಣ ಅನುಗ್ರಹಕ್ಕಾಗಿ ತಾರೀಕು  ಶುಕ್ರವಾರ(ಸೆ.22)ದಂದು “ಸಹಸ್ರ ಮೋದಕ ಹವನ’ ಜರಗಲಿದೆ.

Advertisement

ಮಧ್ಯಾಹ್ನ 1ಗಂಟೆಗೆ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಸಂತರ್ಪಣೆ, ಅದೇ ದಿನ ಸಂಜೆ 6 ರಿಂದ ಭಜನಾ ಕಾರ್ಯಕ್ರಮ ಅಭಿಷೇಕ್ ಕಿಣಿ ಉಡುಪಿ ಇವರಿಂದ ನಡೆಯಲಿದೆ .

ರಾತ್ರಿ 8ರಿಂದ ವಿಶೇಷ ದೀಪಾಲಂಕಾರ, ರಾತ್ರಿಪೂಜೆ ತದನಂತರ, ರಂಗಪೂಜೆ, ಬಳಿಕ ಫಲಾವಳಿ ಏಲಂ ಮತ್ತು ಭೋಜನ ವ್ಯವಸ್ಥೆ ಇರುತ್ತದೆ.ಈ ಪುಣ್ಯಪ್ರದ ಕಾರ್ಯದಲ್ಲಿ ಸಮಾಜ ಬಾಂಧವರು ತ್ರಿಕರಣ ಪೂರ್ವಕವಾಗಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next