ಶ್ರೀನಗರ: “ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಕೊಂಡಿದ್ದು, ಕೇಂದ್ರ ಸರಕಾರದೊಂದಿಗೆ ಮಾತು ಕತೆಗೆ ಮುಂದೆ ಬಂದಿವೆ’ ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ತಿಳಿಸಿದ್ದಾರೆ.
ಶ್ರೀನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದಲ್ಲಿ ಮಾತನಾಡಿದ ಅವರು, “2016ರಲ್ಲಿ ಕೇಂದ್ರ ಸರಕಾರವು ಸಂಧಾನಕ್ಕಾಗಿ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್‌ರನ್ನು ಕಳುಹಿಸಿದ್ದಾಗ ಇದೇ ಪ್ರತ್ಯೇಕತಾವಾದಿಗಳು ಪಾಸ್ವಾನ್‌ರನ್ನು ಹಿಂದಕ್ಕೆ ಕಳುಹಿಸಿದ್ದರು. ಆದರೆ ಈಗ ಅವರೇ ಬೇಷರತ್ ಸಂಧಾನಕ್ಕೆ ಸಜ್ಜಾಗಿದ್ದಾರೆ’ ಎಂದರು.
ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಅವರು, “ರಾಜ್ಯದಲ್ಲಿ ಈಗ ನಮಾಜ್ ಅನಂತರ ನಡೆಯುತ್ತಿದ್ದ ಕಲ್ಲು ತೂರಾಟ ಪ್ರಕರಣಗಳು ನಿಂತಿವೆ. ಜಮ್ಮು ಕಾಶ್ಮೀರದ ಯಾವೊಬ್ಬನಿಗೂ ತೊಂದರೆಯಾಗು ವುದನ್ನು ಭಾರತ ಸರಕಾರ ಬಯಸುವುದಿಲ್ಲ. ಆದರೆ, ಅತ್ತ ಕಡೆಯಿಂದ ಗುಂಡು ಹಾರಿದರೆ ಇತ್ತ ಕಡೆಯಿಂದಲೂ ಗುಂಡು ಹಾರುತ್ತದೆ. ಇದು ಈಗ ರಾಜ್ಯದ ಯುವಜನತೆಗೆ ಅರ್ಥವಾಗಿದೆ’ ಎಂದು ಅವರು ವಿವರಿಸಿದರು.
“ಕಾಶ್ಮೀರದ ಸುಮಾರು 22,000 ವಿದ್ಯಾರ್ಥಿ ಗಳು ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡು ತ್ತಿದ್ದಾರೆ. ಅವರ ಯೋಗಕ್ಷೇಮಕ್ಕಾಗಿ ಸಂಪರ್ಕಾಧಿ ಕಾರಿಗಳನ್ನು ನೇಮಿಸಲಾಗಿದೆ. ಇದರಿಂದ ಅವರಿಗೇನಾದರೂ ತೊಂದರೆಯಾದರೆ ಅವರು ಪೊಲೀಸ್ ಠಾಣೆಗೆ ಅಲೆಯುವ ಪ್ರಮೇಯ ಅವರಿಗೆ ಇಲ್ಲ’ ಎಂದರು.
ಸಮಾರಂಭದಲ್ಲಿ, ಗಡಿಭಾಗಗಳಲ್ಲಿನ ಜನರಿಗಾಗಿ ಪ್ರೀ-ಟು-ಏರ್ ದೂರದರ್ಶನ ವಾಹಿನಿಗಳ ಸೌಲಭ್ಯವುಳ್ಳ ಸೆಟ್‌ಟಾಪ್ ಬಾಕ್ಸ್ ಗಳನ್ನು ವಿತರಿಸಲಾಯಿತು.
ನಾಲ್ವರು ಉಗ್ರರು ಹತ
ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ದಾಳಿಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಅವರನ್ನು, ರಫಿ ಹಸನ್ ಮಿರ್, ಸುಹೈಲ್ ಅಹ್ಮದ್ ಭಟ್, ಶೌಕತ್ ಅಹ್ಮದ್ ಮಿರ್ ಹಾಗೂ ಆಜಾದ್ ಅಹ್ಮದ್ ಖಾಂಡ್ರೆ ಎಂದು ಗುರುತಿಸಲಾಗಿದೆ.