ಈಗಾಗಲೇ ಮೊದಲ ಹಂತದಲ್ಲಿ ರಾಜ್ಯದ 15 ಆಸ್ಪತ್ರೆಗಳಲ್ಲಿ ನಿರ್ಮಾಣ ಕಾಮಗಾರಿ ಮುಗಿದಿದ್ದು, ಎರಡನೇ ಹಂತಕ್ಕೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ಆಯ್ಕೆಯಾಗಿದೆ. ಪುತ್ತೂರು ತಾಲೂಕು ಆಸ್ಪತ್ರೆಯಲ್ಲೂ ವಾರ್ಡ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಈ ವಾರ್ಡ್‌ಗಳು ನಿರ್ಮಾಣಗೊಳ್ಳಲಿವೆ.
Advertisement
ಈ ವಾರ್ಡ್‌ಗಳು ಹೇಗೆ? ಹಿರಿಯ ನಾಗರಿಕರು ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯಬೇಕು. ಈಗಿರುವ ವಾರ್ಡ್‌ಗಳಲ್ಲಿ ಹಿರಿಯರಿಗೆ ಪ್ರತ್ಯೇಕ ಆದ್ಯತೆ ಎಂದೇನಿಲ್ಲ. ಸಾಮಾನ್ಯ ರೋಗಿಗಳಂತೆ ಹಿರಿಯರೂ ತೊಂದರೆ ಅನುಭವಿ ಸಬೇಕು. ಈ ಎಲ್ಲ ಸಮಸ್ಯೆಗಳನ್ನು ಅವಲೋಕಿಸಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್ ನಿರ್ಮಿಸಲಾಗುತ್ತದೆ.
ವೆನ್‌ಲಾಕ್‌ನಲ್ಲಿ ನಿರ್ಮಾಣಗೊಳ್ಳಲಿರುವ ಹಿರಿಯರ ವಾರ್ಡ್ 10 ಹಾಸಿಗೆ ಸಾಮರ್ಥ್ಯವನ್ನು ಹೊಂದಿರಲಿದೆ. ಆದರೆ ಸ್ಥಳ ಅಂತಿಮವಾಗಿಲ್ಲ. ಈಗಿನ ಆಸ್ಪತ್ರೆಗೆ ಹೊಂದಿಕೊಂಡೇ ವಾರ್ಡ್ ಇರುವ ಸಾಧ್ಯತೆ ಹೆಚ್ಚಿದೆ. ಪುತ್ತೂರಿನಲ್ಲಿ 6 ಹಾಸಿಗೆ ಸಾಮರ್ಥ್ಯದ ವಾರ್ಡ್ ನಿರ್ಮಾಣಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್ ತಿಳಿಸಿದ್ದಾರೆ.
Related Articles
ವೃದ್ಧರಿಗಾಗಿ ಎಲ್ಲ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಪ್ರತ್ಯೇಕ ವಾರ್ಡ್ ನಿರ್ಮಿಸಲಾಗುತ್ತಿದೆ. 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ವಿಶೇಷ ಆರೈಕೆಗಾಗಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.
-ಡಾ| ರಂಗಸ್ವಾಮಿ
ಉಪನಿರ್ದೇಶಕ, ಅಸಾಂಕ್ರಾಮಿಕ ರೋಗಗಳ ವಿಭಾಗ, ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು
Advertisement
ಹೆಚ್ಚಿನ ಮಾಹಿತಿ ಅಲಭ್ಯಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್ ನಿರ್ಮಾಣದ ಕ್ರಿಯಾಯೋಜನೆ ರಾಷ್ಟ್ರೀಯ ಆರೋಗ್ಯ ಮಿಷನ್ ಮುಂದಿದೆ. ಆದರೆ ಈವರೆಗೆ ಅನುದಾನ ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
-ಡಾ| ರಾಜೇಶ್ವರೀ ದೇವಿ
ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ವೆನ್‌ಲಾಕ್ ಸರಕಾರಿ ಆಸ್ಪತ್ರೆ 80 ಲಕ್ಷ ರೂ. ಮಿತಿ
ಪ್ರತಿ ಆಸ್ಪತ್ರೆಯಲ್ಲಿ ವಾರ್ಡ್ ನಿರ್ಮಾಣಕ್ಕೆ 80 ಲಕ್ಷ ರೂ.ಗಳ ಮಿತಿ ಇದೆ. ಒಂದೊಂದು ಆಸ್ಪತ್ರೆಗೆ ಒಂದೊಂದು ರೀತಿಯ ವೆಚ್ಚ ತಗಲುವುದರಿಂದ ಇಷ್ಟೇ ಎಂದು ಹೇಳಲಾಗದು. ವೆನ್‌ಲಾಕ್ ಆಸ್ಪತ್ರೆಯ ವಾರ್ಡ್‌ಗೂ ಕೆಎಚ್‌ಎಸ್‌ಆರ್‌ಡಿಯವರು ಟೆಂಡರ್ ಕರೆದು ಬಳಿಕ ಕಾಮಗಾರಿ ಆರಂಭವಾಗುತ್ತದೆ. ಆ ಬಳಿಕವಷ್ಟೇ ಖರ್ಚು ವೆಚ್ಚದ ಮಾಹಿತಿ ಗೊತ್ತಾಗುತ್ತದೆ ಎನ್ನುತ್ತಾರೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು. – ಧನ್ಯಾ ಬಾಳೆಕಜೆ