Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ನಿಯಂತ್ರಣ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದ ಅವರು, ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದವರ ಚಿಕಿತ್ಸೆಗೆಗಾಗಿ 15 ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬ್ಲಾಕ್ ಫಂಗಸ್ ಶಂಕಿತ ಏಳು ಜನರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಕುರಿತಂತೆ ಲ್ಯಾಬ್‌ಗ ಸ್ಯಾಂಪಲ್ ಕಳುಹಿಸಲಾಗಿದೆ ಎಂದರು.
Related Articles
Advertisement
ಸವಣೂರ ಹಾಗೂ ಶಿಗ್ಗಾವಿ ಆಸ್ಪತ್ರೆಗೆ ತಲಾ 20 ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲಾಗಿದೆ. ಬಂಕಾಪೂರದಲ್ಲಿ 10 ಆಕ್ಸಿಜನ್ ಬೆಡ್‌ಗಳನ್ನು ಆರಂಭಿಸಲಾಗಿದೆ ಹಾಗೂ ಮಾಟೇìಬಲ್ ಎಕ್ಸರೇ ಒದಗಿಸಲಾಗಿದೆ. 35 ಕೆವಿ ಜನರೇಟರ್‌ಗೆ ಆದೇಶಿಸಲಾಗಿದ್ದು, ಶೀಘ್ರ ಆಳವಡಿಸಲಾಗುವುದು.
ಆಕ್ಕಿಆಲೂರಿಗೆ 10 ಹಾಗೂ ರಟ್ಟಿಹಳ್ಳಿಗೆ ನಾಲ್ಕು ಹೆಚ್ಚುವರಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾ ವಾರ್ ರೂಂ ಬಲಪಡಿಸಲಾಗಿದೆ. ದಿನದ 24 ತಾಸು ಕಾರ್ಯನಿರ್ವಹಿಸುವಂತೆ 40ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ವಾರ್ ರೂಂನಲ್ಲಿ 10 ಟೆಲಿಪೋನ್ ಸಂಪರ್ಕಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ ಎಂದು ಹೇಳಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೊಂದಿಗೆ ವಿಲಿನಗೊಂಡ ಜಿಲ್ಲೆಯ 10 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಕೋಟಾದ 281 ಬೆಡ್ ಗಳು ಲಭ್ಯವಿವೆ. ಈವರೆಗೆ ಆರು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ಶೇ.50 ರಷ್ಟು ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಬೇಕಾಗಿದೆ. ಈ ಬೆಡ್‌ಗಳನ್ನು ಸರ್ಕಾರವೇ ರೋಗಿಗಳಿಗೆ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.
ಆಕ್ಸಿಜನ್ ಪೂರೈಕೆ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಜಿಲ್ಲೆಗೆ 6 ಕೆಎಲ್ ಆಕ್ಸಿಜನ್ ನಿಗ ದಿಯಾಗಿದೆ. ಇನ್ನೂ ಹೆಚ್ಚಿನ ಬೆಡ್‌ಗಳಿಗೆ ಆಕ್ಸಿಜನ್ ಒದಗಿಸಲು 2 ಕೆಎಲ್ ಆಕ್ಸಿಜನ್ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಪಾಸಿಟಿವ್ ದರ ಇಳಿಕೆ: ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಶೇ.8.34 ರಷ್ಟು ಮಾತ್ರ ಬಂದಿದೆ. ಸೋಂಕು ಇಳಿಮುಖವಾಗುತ್ತಿರುವುದಕ್ಕೆ ಜಿಲ್ಲಾ ಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಎಸ್ಪಿ ಕೆಜಿ ದೇವರಾಜು, ಜಿಪಂ ಸಿಇಒ ಮಹಮ್ಮದ ರೋಷನ್, ಅಪರ ಡಿಸಿ ಎಸ್.ಯೋಗೇಶ್ವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಇತರರಿದ್ದರು.