Advertisement
ಉದ್ಯಾನಗಳು* ಕಂಟೈನ್ಮೆಂಟ್ ವಲಯಲ್ಲಿನ ಉದ್ಯಾನಗಳು ಬಂದ್.
* ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದು, ಸಭೆ ನಡೆಸುವಂತಿಲ್ಲ, ಉಗುಳುವಂತಿಲ್ಲ.
* 65 ವರ್ಷ ಮೇಲ್ಪಟ್ಟವರು, ಗರ್ಭಿಣಿ, 10 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧ.
* ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮುಖಗವಸು ಕಡ್ಡಾಯ, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸತಕ್ಕದ್ದು.
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಸಿಬ್ಬಂದಿಯನ್ನು ಸಂಬಂಧಪಟ್ಟ ಇಲಾಖೆ ನಿಯೋಜಿಸಬೇಕು.
* ಉದ್ಯಾನದಲ್ಲಿ ಗುರುತು ಮಾಡಿದ ಆಸನಗಳಲ್ಲಿಕುಳಿತುಕೊಳ್ಳಬೇಕು.
* ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಅಲ್ಲಲ್ಲಿ ಫಲಕಗಳನ್ನು ಹಾಕಿರಬೇಕು.
* ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಹೊಂದಿದವರಿಗೆ ಮಾತ್ರ ಹೇರ್‌ಕಟ್, ಪಾರ್ಲರ್ ಒಳಗೆ ಪ್ರವೇಶ ಭಾಗ್ಯ. ಅದೂ ಸೀಮಿತ! .
* ಗ್ರಾಹಕರಿಗೆ ಸೇವೆಗೆ ನಿರ್ದಿಷ್ಟ ಸಮಯವನ್ನು ನೀಡಬೇಕು. ಆ ಮೂಲಕ ಅಂಗಡಿಯಲ್ಲಿ ಕಾಯುವಿಕೆ ಯನ್ನು ಸಾಧ್ಯವಾದಷ್ಟು ಇಲ್ಲದಂತೆ ನೋಡಿಕೊಳ್ಳಬೇಕು .
* ಕಾರ್ಯನಿರ್ವಹಿಸುವವರಿಗೂ ಶುಚಿತ್ವಕ್ಕಾಗಿ ಹಾಗೂ ಬಳಕೆ ಮಾಡಿದ ಉಪಕರಣಗಳಉಪಯೋಗಿಸಲು ನಿರ್ದಿಷ್ಟ ಸಮಯ ಮೀಸಲಿಡತಕ್ಕದ್ದು.
* ಗ್ರಾಹಕರು ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕು.
* ಸಲೂನ್/ ಪಾರ್ಲರ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮುಖಗವಸು, ಕೈಗವಸು, ಶೀಲ್ಡ್ (ವೈಸರ್) ಧರಿಸಿರಬೇಕು.
* ಗ್ರಾಹಕರಿಗೆ ಉಪಯೋಗಿಸುವ ಗೌನ್, ಕೊರಳಿಗೆ ಹಾಕುವ ಪಟ್ಟಿ ಪ್ರತಿ ಬಾರಿ ಬದಲಾಯಿಸಬೇಕು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ
* ಸಾಮೂಹಿಕ ಸಭೆಗಳನ್ನು ನಡೆಸಬಾರದು
* ಹೊರಭಾಗಗಳಿಂದ ಬರುವ ಚಾಲಕರು, ಸಹಾಯಕರು ಬರುವ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಜತೆಗೆ, ಸ್ಯಾನಿಟೈಜರ್ ಹಾಗೂ ಸೋಪ್ ನೀಡುವ ಮೂಲಕ ಕೈತೊಳೆದುಕೊಳ್ಳಲು ವ್ಯವಸ್ಥೆ ಮಾಡಬೇಕು.
* ತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ನಿಗದಿತ ಸ್ಥಳ ಗುರುತಿಸಬೇಕು.
* ವ್ಯಾಯಾಮ ಶಾಲೆಗಳು, ಈಜು ಕೊಳಗಳು, ರಿಕ್ರಿಯೇಷನ್ ಕ್ಲಬ್‌ಗಳು ಮತ್ತು ಕ್ರೀಡಾ ಚಟುವಟಿಕೆಗಳಿಗಿಲ್ಲ ಅವಕಾಶ.
* ಹೋಂ ಕ್ವಾರಂಟೈನ್‌ಗೆ ಒಳಗಾಗಿರುವವರು ಮನೆಯಿಂದ ಹೊರಬರದಂತೆ ಸಂಘಗಳ ಸದಸ್ಯರು ಕ್ರಮ ವಹಿಸಬೇಕು.
* ತಾವು ನೆಲೆಸಿರುವ ಸ್ಥಳಗಳಲ್ಲಿ ಯಾರಿಗಾದರೂ ಕೊರೋನಾ ಸೋಂಕು ಹರಡಿರುವುದು ಪತ್ತೆಯಾದಲ್ಲಿ ಅಂತಹವರನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ವಹಿಸಬೇಕು.
* ಪರೀಕ್ಷೆಗೆ ಹೋಗಲು ಅಗತ್ಯ ವಾಹನ ಸೌಲಭ್ಯ ಕಲ್ಪಿಸಬೇಕು.
Related Articles
* ದೇವಾಲಯಗಳಲ್ಲಿ ದೇವರ ಮೂರ್ತಿಗಳು, ಕಂಬಗಳನ್ನು ಸ್ಪರ್ಶಿಸುವುದು ನಿಷಿದ್ಧ. ಭಜನೆಗಿಲ್ಲ ಅವಕಾಶ.
* ಒಬ್ಬರನ್ನೊಬ್ಬರು ಸ್ಪರ್ಶ ಮಾಡದೆ ದೂರದಿಂದಲೇ ಶುಭಾಶಯ ಕೋರಬೇಕು.
* ಸಾಮೂಹಿಕ ಪ್ರಾರ್ಥನೆಗೆ ಭಕ್ತರು ತಮ್ಮ ಮನೆಗಳಿಂದಲೇ ನೆಲಹಾಸು ತರಬೇಕು.
* ಪ್ರಸಾದ ಮತ್ತು ತೀರ್ಥ ಕೊಡುವಂತಿಲ್ಲ.
* ಒಬ್ಬರಿಗೊಬ್ಬರು ಆರು ಅಡಿ ದೂರಲ್ಲಿನಿಲ್ಲುವುದಕ್ಕೆ ವ್ಯವಸ್ಥೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಅಳವಡಿಸಿರಬೇಕು.
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡುವುದಕ್ಕಾಗಿ ಹೆಚ್ಚು ಸಿಬ್ಬಂದಿ ನೇಮಕ ಮಾಡಬೇಕು.
* ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಮತ್ತು ದೇವಾಲಯಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಪ್ರತ್ಯೇಕ ದ್ವಾರಗಳನ್ನು ಬಳಸಬೇಕು.
* ಹೆಚ್ಚು ಜನ ಪ್ರವೇಶಕ್ಕೆ ಅವಕಾಶ ನೀಡದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು.
* ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿನಂಗ್ ಮಾಡಿ ಒಳ ಪ್ರವೇಶಕ್ಕೆ ಅವಕಾಶ ನೀಡಬೇಕು. ಜತೆಗೆ, ಹೆಚ್ಚು ಜ್ವರ ಹಾಗೂ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಒಳ ಪ್ರವೇಶಕ್ಕೆ ಅವಕಾಶ ನೀಡಬಾರದು.
* ದೇವಾಲಯದ ಆವರಣವನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಬಾಗಿಲ ಹಿಡಿಕೆ, ಎಲಿವೇಟರ್‌ಗಳ ಬಟನ್‌ಗಳು, ಕೈ ಹಿಡಿಕೆಗಳು ಮತ್ತು ಮೇಜುಗಳನ್ನು ಸ್ವಚ್ಛಗೊಳಿಸುತ್ತಿರಬೇಕು.
* ದೇವಾಲಯಗಳಿಗೆ ಭಕ್ತರ ಕುಟುಂಬಗಳಿಗೆ ತಮ್ಮ ಪಾದರಕ್ಷೆಗಳನ್ನು ಬಿಡುವುದಕ್ಕಾಗಿ ಪ್ರತ್ಯೇಕವಾಗಿ ಸ್ಲಾಟ್‌ಗಳನ್ನು ಒದಗಿಸಬೇಕು.
* ಭಕ್ತರು ಉಸಿರಾಡುವಾಗ ಪಕ್ಕದವರಿಗೆ ತೊಂದರೆಯಾಗದ ರೀತಿಯಲ್ಲಿ ಮೂಗು ಮತ್ತು ಬಾಯಿ ಮುಚ್ಚುವಂತೆಹ ಮಾಸ್ಕ್ಗಳನ್ನು ಅಳವಡಿಸಬೇಕು.
* ಎಲ್ಲಿಯೂ ಉಗುಳುವಂತಿಲ್ಲ
* ವಾಹನ ನಿಲ್ದಾಣಗಳಲ್ಲಿ ಸಿಬ್ಬಂದಿ ಮಾಸ್ಕ್ ಹಾಕಿರಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೋಂಕು ಹರಡದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು.
* ಹವಾನಿಯಂತ್ರಣಾ ವ್ಯವಸ್ಥೆಯನ್ನು 24 ಡಿಗ್ರಿಯಿಂದ 30 ಡಿಗ್ರಿಯವರೆಗಿನ ಒಳಗಡೆ ಸೆಲ್ಸಿಯಸ್‌ನಷ್ಟು ಮಾತ್ರ ಇರಬೇಕು. ಶೇ. 70ರಷ್ಟು ಪ್ರಮಾಣದ ಶುದ್ದಗಾಳಿ ಉಸಿರಾಟಕ್ಕೆ ವ್ಯವಸ್ಥೆ ಮಾಡಬೇಕು.
Advertisement
ಕಚೇರಿಗಳ ನಿರ್ವಹಣೆ ಹೀಗಿರಲಿ* ಕಂಟೈನ್ಮೆಂಟ್ ವಲಯದಲ್ಲಿದ್ದ ಕಚೇರಿಗಳನ್ನು ತೆರೆಯುವಂತಿಲ್ಲ.
* ಉಳಿದ ಕಡೆ 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಮಕ್ಕಳು ಕಚೇರಿಗೆ ಬರುವುದನ್ನು ನಿಯಂತ್ರಿಸಬೇಕು.
* ಸಾಧ್ಯವಾದಷ್ಟು ಮನೆಯಲ್ಲೇ ಕೆಲಸ ಮಾಡುವುದು ಆದ್ಯತೆಯಾಗಲಿ.
* ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಬೇಕು.
* ಕಚೇರಿ ಪ್ರವೇಶ ಮತ್ತು ಹೊರ ಹೋಗಲು ಪ್ರತ್ಯೇಕ ದ್ವಾರಗಳನ್ನು ತೆರೆಯಬೇಕು.
* ಲಿಫ್ಟ್, ಎಸ್ಕಲೇಟರ್, ಕೆಲಸ ಮಾಡುವ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು.
* ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕು. ಕ್ಲಿನಿಕ್‌ಗಳು
* ರೋಗಿಗಳಿಗೆ ಟೆಲಿಕನ್ಸಲ್ಟೆàಷನ್ ಸೂಕ್ತ, ಅಗತ್ಯ ಇದ್ದರೆ ಮಾತ್ರ ಕ್ಲಿನಿಕ್‌ಗೆ ಕರೆಸಿಕೊಳ್ಳಬೇಕು .
* ತಪಾಸಣೆ ವೇಳೆ ಒಬ್ಬರಿಗೆ ಪ್ರವೇಶಕ್ಕೆ ಅವಕಾಶ ನೀಡುವುದು.
* ಇಎನ್‌ಟಿ ವೈದ್ಯರು ಕಿಟ್ ಧರಿಸಬೇಕು.
* ಊಟ ಮಾಡುವಾಗ, ನೀರು ಕುಡಿಯುವಾಗ ಹ್ಯಾಂಡ್ ಗ್ಲೌಸ್ ಬದಲಿಸಬೇಕು.
* ಎಂಡೋಸ್ಕೋಪಿ ಪರೀಕ್ಷೆಯನ್ನು ಆದಷ್ಟು ತಡೆಯಬೇಕು. ತುರ್ತು ಎನಿಸಿದರೆ ಮುನ್ನೆಚ್ಚರಿಕೆ ವಹಿಸಬೇಕು.
* 65 ವರ್ಷ ಮೇಲ್ಪಟ್ಟವರು, ಮಕ್ಕಳು ಮತ್ತು ಗರ್ಭಿಣಿಯರು ಕ್ಲಿನಿಕ್‌ಗಳಿಗೆ ಬರುವುದನ್ನು ಆದಷ್ಟು ತಡೆಯಬೇಕು. ಹೋಟೆಲ್, ಮಾಲ್‌ಗಳು
* ಕುರ್ಚಿ, ಬೆಂಚ್, ಎಲಿವೇಟರ್, ಲಿಫ್ಟ್ಗಳ ಸ್ವಿಚ್ ಹ್ಯಾಂಡ್ ಡ್ರೆç ಕ್ಲೀನರ್‌ಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು .
* ಹೆಚ್ಚು ಜನ ಬಳಸುವ ಪ್ರದೇಶ, ನೀರು ಕುಡಿಯುವ ಜಾಗ, ಶೌಚಾಲಯ ಹಾಗೂ ಕೌಂಟರ್ ಮುಂಭಾಗದಲ್ಲಿ ಸೋಂಕು ನಿರೋಧಕ ದ್ರಾವಣ ಬಳಸಿ ಸ್ವಚ್ಛ ಕಾಪಾಡಿಕೊಳ್ಳುವುದು.
* ಫುಡ್‌ಕೋರ್ಟ್ ಪ್ರದೇಶದಲ್ಲಿ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕೊಡಬೇಕು .
* ನಗದು ಪಾವತಿ ಹಾಗೂ ಊಟ, ತಿಂಡಿಗಳ ಆರ್ಡರ್ ಮಾಡಲು ಇ-ತಂತ್ರಾಂಶ ಬಳಸಿಕೆಗೆ ಉತ್ತೇಜನ ನೀಡಬೇಕು.
* ಗ್ರಾಹಕರು ಟೇಬಲ್ ಖಾಲಿ ಮಾಡಿದ ಮೇಲೆ ಪ್ರತಿ ಬಾರಿಯೂ ಟೇಬಲ್ ಹಾಗೂ ಕುರ್ಚಿಗಳನ್ನು ಸ್ಯಾನಿಟೈಸ್ ಮಾಡಬೇಕು.
* ಗ್ರಾಹಕರು ಊಟ, ತಿಂಡಿ ಸೇವನೆ, ನೀರು ಮತ್ತು ಪಾನೀಯ ಕುಡಿಯುವ ಸಂದರ್ಭಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು.