ಪೀಠಾಧೀಶರು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿದ್ದಾರೆ. ಸಭೆ ಬುಧವಾರ ಬೆಳಗ್ಗೆ 11 ಗಂಟೆಗೆ ವಿಜಯನಗರದ
ಮನುವನದಲ್ಲಿ ನಡೆಯಲಿದೆ. ಸಭೆ ನೇತೃತ್ವವನ್ನು ಪಂಚಾಚಾರ್ಯರ ಪೈಕಿ ಕೇದಾರ ಪೀಠದ ಸ್ವಾಮೀಜಿ ಹೊರತು ಪಡಿಸಿ, ಬಾಳೆಹೊನ್ನೂರು, ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಪೀಠದ ಸ್ವಾಮೀಜಿಗಳು ವಹಿಸಲಿದ್ದಾರೆ.
Advertisement
ಇವರೊಂದಿಗೆ ವಿರಕ್ತ ಮಠದ ಮುರಗೋಡು, ಹುಕ್ಕೇರಿ, ಮುನವಳ್ಳಿ ಹಾಗೂ ಕವಟಗಿಮಠ ಸ್ವಾಮೀಜಿಗಳೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುತ್ತೂರು ಮಠ ಹಾಗೂ ತುಮಕೂರು ಸಿದ್ದಗಂಗಾ ಶಿವಕುಮಾರ ಸ್ವಾಮಿಜಿಗೂ ಆಹ್ವಾನ ನೀಡಲಾಗಿದ್ದು, ಸಭೆಗೆ ಹಾಜರಾಗುವುದು ಅನುಮಾನ ಎಂದು ತಿಳಿದು ಬಂದಿದೆ.
ಕುರ್ಚಿ ಹಾಕಿಸಿಕೊಳ್ಳುತ್ತಿದ್ದ ಪಂಚ ಪೀಠಾಧೀಶರು, ವೇದಿಕೆಯಲ್ಲಿ ಸಮಾನವಾಗಿ ಕೂರಲು ಸಹಮತ ವ್ಯಕ್ತಪಡಿಸಿದ್ದಾರೆ
ಎಂದು ಹೇಳಲಾಗಿದ್ದು, ಇನ್ನು ಮುಂದೆ ಬಸವಣ್ಣನ ಹೆಸರನ್ನೂ ಬಳಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು
ಬಂದಿದೆ. ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಪಂಚಾಚಾರ್ಯರು
ನಿರ್ಧರಿಸಿದ್ದು, ಬುಧವಾರ ಸಂಜೆ 8 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರ ಸಮಯ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲಾಧ್ಯಕ್ಷಗೆ ನೋಟಿಸ್: ಪ್ರತ್ಯೇಕ ಧರ್ಮಕ್ಕೆ ಬೆಂಬಲ ಸೂಚಿಸಿರುವ ವೀರಶೈವ ಮಹಾಸಭೆಯ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರಣ್ಣ ಬಿಜಾಪುರ ಅವರಿಗೆ ವೀರಶೈವ ಮಹಾಸಭೆ ಕಾರಣ ಕೇಳಿ ನೋಟಿಸ್ ನೀಡಿದೆ.