Advertisement
ಶೀಘ್ರವೇ ವರದಿ ಅಂಗೀಕರಿಸಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಸಾಮಾಜಿಕ ನ್ಯಾಯಪರ ವೇದಿಕೆ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
Related Articles
Advertisement
ಮೂಲಸೌಲಭ್ಯ ಕಲ್ಪಿಸಿ: ಶೋಷಿತ ಬುಡಕಟ್ಟು ಜನರು ವಾಸವಾಗಿರುವ ಪ್ರದೇಶಗಳಿಗೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹಮ್‌ಗೊàರ್ ಕಟ್‌ಮಾಳೊ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೇಶಕ್ಕೆ ಸ್ವಾತಂತ್ರ ದೊರೆತು 70 ವರ್ಷ ಕಳೆದರು ಲಂಬಾಣಿ ಹಾಗೂ ಮತ್ತಿತರ ಸಮುದಾಯದ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿಲ್ಲ.
ಬದಲಿಗೆ ಖಾಸಗಿ ಮಾಲಿಕತ್ವದ ಜಮೀನು, ಅರಣ್ಯಭೂಮಿ, ಬಗರ್‌ಹುಕುಂ ಜಮೀನುಗಳಲ್ಲಿ ವಾಸಿಸುತ್ತಿದ್ದು, ಸೌಕರ್ಯ ವಂಚಿತರಾಗಿದ್ದಾರೆ. ಶೋಷಿತ ಸಮುದಾಯಗಳು ವಾಸಿಸುವ ಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಉದ್ದೇಶದ ಕರ್ನಾಟಕ ಭೂಸುಧಾರಣೆಗಳ ವಿಧೇಯಕ-2016ನ್ನು ಅನುಮೋದಿಸಬೇಕೆಂದು ಒತ್ತಾಯಿಸಿದರು.
ರಸ್ತೆಯಲ್ಲೇ ಸಸಿನೆಟ್ಟರು: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಗುಂಡಿಬಿದ್ದ ಕಡೆಗಳಲ್ಲಿ ಸಸಿನೆಡುವ ಮೂಲಕ ನಗರದ ನಜರ್‌ಬಾದ್‌ನ ಲೋಕರಂಜನ್ ಮಹಲ್ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.
ನಗರದಲ್ಲಿ ಸುರಿದ ಮಳೆಗೆ ನಗರದ ಬಹುತೇಕ ಪ್ರಮುಖ ರಸ್ತೆಗಳೆಲ್ಲಾ ಹದಗೆಟ್ಟು, ಗುಂಡಿಬಿದ್ದಿದೆ. ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇವುಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ದಸರಾ ವೇಳೆ ಎಲ್ಲಾ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರೂ ದಸರಾ ಮುಗಿದರು ಇಂದಿಗೂ ಬಹುತೇಕ ರಸ್ತೆಗಳಲ್ಲಿ ಗುಂಡಿಮುಚ್ಚುವ ಕಾರ್ಯ ಮುಗಿದಿಲ್ಲ ಎಂದು ನಗರದ ಇಟ್ಟಿಗೆಗೂಡು, ನಜರಬಾದ್ ನಿವಾಸಿಗಳು ದೂರಿದರು.