Advertisement

ಬೆಂಗ್ರೆಯಲ್ಲಿ ನಾಡದೋಣಿಗಳಿಗೆ ಪ್ರತ್ಯೇಕ ಜೆಟ್ಟಿ

11:19 PM Sep 17, 2019 | mahesh |

ಮಹಾನಗರ: ಮೀನುಗಾರಿಕೆ ಬೋಟುಗಳ ತಂಗುವಿಕೆಗೆ ಮಂಗಳೂ ರಿನಲ್ಲಿ ದಕ್ಕೆ ವಿಸ್ತರಣಾ ಕಾಮಗಾರಿ ನಡೆ ಯುತ್ತಿರುವಂತೆಯೇ, ನಗರ ಬೆಂಗ್ರೆಯ ಬದಿಯಲ್ಲಿ ನಾಡದೋಣಿಗಳ ತಂಗುವಿಕೆಗೆ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

Advertisement

ಮೀನುಗಾರಿಕೆ ಇಲಾಖೆಯ ನಬಾರ್ಡ್‌ 24ರ ಯೋಜನೆಯಡಿಯಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. 3.37 ಕೋ.ರೂ.ಗಳ ಈ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ತಾಂತ್ರಿಕ ಮಂಜೂರಾತಿಯ ನಿರೀಕ್ಷೆಯಲ್ಲಿದೆ. ಬೆಂಗ್ರೆ ಭಾಗದಲ್ಲಿ ನಡೆಯುತ್ತಿರುವ ಮೂರನೇ ಮೀನುಗಾರಿಕೆ ಜೆಟ್ಟಿಯ ಪಕ್ಕಕ್ಕೆ ಹೊಂದಿಕೊಂಡಂತೆ ಹೊಸ ನಾಡದೋಣಿಗಳ ನಿಲುಗಡೆಯ ಜೆಟ್ಟಿಗೆ ಉದ್ದೇಶಿಸಲಾಗಿದೆ.

ನಾಡ ದೋಣಿಗಳ ನಿಲುಗಡೆಗೆ ಮಂಗ ಳೂರು ಬಂದರು ವ್ಯಾಪ್ತಿಯಲ್ಲಿ ಸೂಕ್ತ ವ್ಯವಸ್ಥೆಗಳು ಇಲ್ಲ ಎಂಬ ನೆಲೆಯಲ್ಲಿ ಬೆಂಗ್ರೆ ಪರಿಸರದ ನಾಡದೋಣಿ ಮೀನುಗಾರರು ಹಲವು ವರ್ಷಗಳಿಂದ ಮುಖಂಡರ ನೇತೃತ್ವದಲ್ಲಿ ಆಡಳಿತ ವ್ಯವಸ್ಥೆಯ ಗಮನಸೆಳೆದಿದ್ದರು.

ಆದರೆ, ಇದಕ್ಕೆ ಸೂಕ್ತ ಸ್ಪಂದನೆ ದೊರಕಿ ರಲಿಲ್ಲ. ಈಗ ನಾಡದೋಣಿಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಬಹುದಾದ ಹೊಸ ಜೆಟ್ಟಿ ನಿರ್ಮಾಣಕ್ಕೆ ಇಲಾಖೆಯು ಮುಂದಾ ಗಿರುವುದು ಮೀನುಗಾರರಲ್ಲಿ ಹರ್ಷ ತಂದಿದೆ.

ಸುಮಾರು 80 ಮೀಟರ್‌ ಅಗಲ, 100 ಮೀಟರ್‌ ಉದ್ದದಲ್ಲಿ ನೂತನ ಜೆಟ್ಟಿ ನಿರ್ಮಾಣವಾಗಲಿದೆ. ನಾಡದೋಣಿಗಳನ್ನು ಸುಲಲಿತ ರೀತಿಯಲ್ಲಿ ನಿಲುಗಡೆಗೆ ಇಲ್ಲಿ ಅವಕಾಶವಿರಲಿದೆ, ಗೋಲ ಮಾದರಿಯಲ್ಲಿ ಡ್ರೆಜ್ಜಿಂಗ್‌ ಮಾಡಿ ಇಲ್ಲಿ ನಾಡದೋಣಿ ನಿಲುಗಡೆಗೆ ಆದ್ಯತೆ ನೀಡಲಾಗುತ್ತದೆ. ಸುಮಾರು 100 ನಾಡದೋಣಿಗಳಿಗೆ ಇಲ್ಲಿ ನಿಲುಗಡೆಗೆ ಅವಕಾಶ ಸಿಗಲಿದೆ.

Advertisement

150ರಷ್ಟು ನಾಡದೋಣಿಗಳು
ಸದ್ಯ ಬೆಂಗ್ರೆ ವ್ಯಾಪ್ತಿಯಲ್ಲಿ ಸುಮಾರು 150ರಷ್ಟು ನಾಡದೋಣಿಗಳಿವೆ. ಈ ದೋಣಿಯ ಮೂಲಕ ಮಳೆಗಾಲದಲ್ಲಿ ಮೀನುಗಾರಿಕೆಗೆ ರಜೆ ಇರುವ ಸಮಯದಲ್ಲಿ ರಾಣಿ ಬಲೆ ಹಾಕಿ ಮೀನುಗಾರಿಕೆ ನಡೆಸಲಾಗುತ್ತದೆ. ಸಮುದ್ರದಲ್ಲಿ ಸುಮಾರು 20 ಕಿ.ಮೀ. ನ ಒಳಗಡೆಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತದೆ. ಉಳಿದ ಸಮಯದಲ್ಲಿ ಗಿಲ್‌ನೆಟ್‌ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಜತೆಗೆ ನದಿಯಲ್ಲಿಯೂ ಮೀನುಗಾರಿಕೆ ನಡೆಸುತ್ತಾರೆ. ಇಂತಹ ದೋಣಿಗಳು ನಿಲುಗಡೆ ಮಾಡಲು ಪರದಾಡುವಂತಾಗಿದೆ.¸ಬೆಂಗ್ರೆ ಫೆರಿ ಜೆಟ್ಟಿಯ ಬಳಿಯಲ್ಲಿ ನಾಡದೋಣಿಗಳನ್ನು ನಿಲ್ಲಿಸಲಾಗುತ್ತದೆ. ಈ ದೋಣಿಗಳನ್ನು ನೀರಿನಿಂದ ಮೇಲೆ ಎಳೆದು ಹಗ್ಗದ ಸಹಾಯದಿಂದ ಕಟ್ಟಿ ಹಾಕಲಾಗುತ್ತದೆ.

“ಯೋಜನೆಗೆ ಅನುಮೋದನೆ’
ಮಂಗಳೂರು ಮೀನುಗಾರಿಕೆ ಬಂದರಿನ ಬೆಂಗ್ರೆ ಬದಿಯಲ್ಲಿ ನಾಡದೋಣಿಗಳ ತಂಗುವಿಕೆಗಾಗಿ ಕೃತಕ ರೇವು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. 3.37 ಕೋ.ರೂ.ಗಳ ಈ ಯೋಜನೆಯು ಈಗಾಗಲೇ ಅನುಮೋದನೆಗೊಂಡಿದ್ದು, ತಾಂತ್ರಿಕ ಮಂಜೂರಾತಿ ಹಂತದಲ್ಲಿದೆ.
 - ಸುಜನ್‌ ಚಂದ್ರ ರಾವ್‌,
ಸಹಾಯಕ ಕಾ.ನಿ.ಎಂಜಿನಿಯರ್‌, ಬಂದರು ಹಾಗೂ ಮೀನುಗಾರಿಕಾ ಇಲಾಖೆ-ಮಂಗಳೂರು.

ದಿನೇಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next