Advertisement
ಪಟ್ಟಣದ ಶಿವಣ್ಣ ಮತ್ತು ಶಾಂತಮ್ಮ ದಂಪತಿಗಳು ತಮ್ಮ ರಾಜಾಪುರದಲ್ಲಿ ಇರುವ ಜಮೀನಿನಲ್ಲಿ ಹಾಲು ಕರೆಯುವ ಸಲುವಾಗಿ ಗೋಣಿಕೊಪ್ಪಾ ರಸ್ತೆಯಲ್ಲಿ ತೆರಳುತ್ತಿದ್ದು ಮಹದೇಶ್ವರ ದೇವಾಲಯದ ತಿರುವಿನಲ್ಲಿ ಅಪರಚಿತ ವಾಹನ ಢಿಕ್ಕಿಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
Related Articles
Advertisement
ಪಿರಿಯಾಪಟ್ಟಣ ಟೌನ್‌ನ ಮೇದರ್ ಬ್ಲಾಕ್ ನ ಪುಟ್ಟಯ್ಯ ಎಂಬುವವರ ಮಗ ರಂಜಿತ್ (21) ಎಂಬಾತನೆ ಮೃತಪಟ್ಟಿರುವಾತ.ಈತ ಪಿರಿಯಾಪಟ್ಟಣ ಟೌನ್‌ನಿಂದ ಮಡಿಕೇರಿ ಮಾರ್ಗವಾಗಿ ತಮ್ಮ ಗಾಂಧಿನಗರ ಬಡವಾಣೆಗೆ ತೆರಳುತ್ತಿದ್ದು ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯ ಎದುರು ಹಿಂಬದಿಯಿಂದ ಬರುತ್ತಿದ್ದುಕೆಪಿಟಿಸಿಎಲ್ ಕಚೇರಿಯ ಟಿಟಿವಾಹನ ಡಿಕ್ಕಿಹೊಡೆದ ಪರಿಣಾಮ ತೀವ್ರ ಗಾಯಾಳುವಾಗಿದ್ದ ರಂಜಿತ್‌ನನ್ನು ಮೈಸೂರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಜಿತ್ ಮೃತಪಟ್ಟಿದ್ಧಾನೆ ಎಂದು ಪಿರಿಯಾಪಟ್ಟಣ ಪೊಲೀಸರು ತಿಳಿಸಿದ್ಧಾರೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.