Advertisement

Digital ಉಪಕರಣಗಳನ್ನು ವಶಪಡಿಸಿಕೊಳ್ಳಬೇಕಾದರೆ  ಪತ್ರಕರ್ತರಿಗೆ ಪ್ರತ್ಯೇಕ ಮಾರ್ಗಸೂಚಿ 

12:58 AM Nov 08, 2023 | Team Udayavani |

ಹೊಸದಿಲ್ಲಿ: ಸುದ್ದಿಗಳನ್ನು ಸಂಗ್ರಹಿಸಲು ಮಾಧ್ಯಮ ಪ್ರತಿನಿಧಿಗಳು ತಮ್ಮದೇ ಆದ ಮೂಲಗಳನ್ನು ಹೊಂದಿರುತ್ತಾರೆ ಈ ನಿಟ್ಟಿನಲ್ಲಿ ಯಾವುದೇ ತನಿಖೆಗಾಗಿ ಅವರ ಡಿಜಿಟಲ್‌ ಉಪಕರಣಗಳನ್ನು ವಶಪಡಿಸಿಕೊಳ್ಳಬೇಕಾದರೆ ಅದಕ್ಕಾಗಿ ಪ್ರತ್ಯೇಕ ಮಾರ್ಗ ಸೂಚಿಗಳನ್ನು ಕೇಂದ್ರ ಸರಕಾರ ಸಿದ್ಧಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಫೌಂಡೇಶನ್‌ ಆಫ್ ಮೀಡಿಯಾ ಪ್ರೊಫೆಶನಲ್ಸ್‌ ಎಂಬ ಸಂಸ್ಥೆಯು ಪತ್ರಕರ್ತರ ಡಿಜಿಟಲ್‌ ಸಾಧನಗಳನ್ನು ವಶಪಡಿಸಿಕೊಳ್ಳಲು ಪ್ರತ್ಯೇಕ ಮಾರ್ಗಸೂಚಿ ಕೋರಿ ಸಲ್ಲಿ ಸಿದ್ದ ಅರ್ಜಿಯನ್ನು ನ್ಯಾ| ಸಂಜಯ್‌ ಕಿಶನ್‌ ಕೌಲ್‌ ಅವರ ನೇತೃತ್ವದ ನ್ಯಾಯ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಪತ್ರಕರ್ತರ ಮೂಲಗಳ ಸುರಕ್ಷೆಯನ್ನು ಗಮನ ದಲ್ಲಿಟ್ಟುಕೊಂಡು ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಪ್ರತ್ಯೇಕ ಮಾರ್ಗಸೂಚಿ ರಚಿಸಲು ಕೇಂದ್ರಕ್ಕೆ ನಿರ್ದೇಶಿಸಿದೆ. ಇದನ್ನು ಸರಕಾರವೇ ರೂಪಿಸುವುದು ಸೂಕ್ತ! ಈ ವಿಚಾರ ಗಂಭೀರವಾದದ್ದು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next