Advertisement
ಸದ್ಯ ಬಿಟೆಕ್ ಅಥವಾ ಎಂಟೆಕ್ ಪದವಿಗಳನ್ನು ಆಧರಿಸಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಬಹುತೇಕ ಇಂಜಿನಿಯರುಗಳು ಹಾಗೂ ವೈದ್ಯರು ಉದ್ಯೋಗರ್ಹರಾಗಿರುವುದಿಲ್ಲ ಎಂಬ ಆರೋಪದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಎಐಸಿಟಿಇ ಅಡಿಯಲ್ಲಿ ಅಟಲ್ ಎಂಬ ವಿಶೇಷ ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಜೈಪುರ, ತಿರುವನಂತಪುರ, ಗುವಾಹಟಿ ಮತ್ತು ವಡೋದರಾದಲ್ಲಿ ಈ ಸಂಸ್ಥೆಗಳಿದ್ದು, ಇನ್ನೂ 11 ಕಡೆ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಈಗಾಗಲೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನೆ ಕೇಂದ್ರ (ಎನ್‌ಟಿಟಿಟಿಆರ್) ಹೊಂದಿದೆ. ಅಟಲ್ ಸಂಸ್ಥೆಗಳ್ಳಲ್ಲಿ ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್ ಟೆಕ್ನಾಲಜಿ, ಸೈಬರ್ ಸೆಕ್ಯುರಿಟಿ ಸೇರಿದಂತೆ ಸುಧಾರಿತ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. Advertisement
ಇಂಜಿನಿಯರಿಂಗ್ ಬೋಧಕರಿಗೂ ಪ್ರತ್ಯೇಕ ಪರೀಕ್ಷೆ
01:34 AM Sep 13, 2019 | mahesh |
Advertisement
Udayavani is now on Telegram. Click here to join our channel and stay updated with the latest news.