Advertisement

ಪ್ರತ್ಯೇಕ ಪರೀಕ್ಷೆ ವ್ಯವಸ್ಥೆ

11:16 PM Mar 10, 2020 | Lakshmi GovindaRaj |

ಬೆಂಗಳೂರು: ಮಂಗಳವಾರ ಕೊರೊನಾ ಸೋಂಕು ಪತ್ತೆಯಾದ 50 ವರ್ಷದ ಟೆಕ್ಕಿ ಪುತ್ರಿಗೆ ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇದೆ. ಈ ವಿದ್ಯಾರ್ಥಿನಿಯನ್ನೂ ಆರೋಗ್ಯ ಇಲಾಖೆ ಕೊರೊನಾ ಸೋಂಕು ಶಂಕಿತಳು ಎಂದು ಗುರುತಿಸಿ, ಮನೆಯಲ್ಲೇ ಪ್ರತ್ಯೇಕ ನಿಗಾ ವಹಿಸಿದೆ. ಹೀಗಾಗಿ, ಪರೀಕ್ಷೆ ಕೈತಪ್ಪಬಹುದು ಎಂಬ ಆತಂಕವಿತ್ತು.

Advertisement

ಆದರೆ, ಪಿ.ಯು ಮಂಡಳಿಯು ಕೊರೊನಾ ಶಂಕಿತ ವಿದ್ಯಾರ್ಥಿನಿಗೆ ಬುಧವಾರ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದೆ. ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಪಿ.ಯು.ಮಂಡಳಿ ನಿರ್ದೇಶಕಿ ಎಂ.ಕನಗವಲ್ಲಿ, ಕೊರೊನಾ ಶಂಕಿತ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಲಂಡನ್‌ನಿಂದ ಬಂದ “ವರ’ ವೈದ್ಯರ ಅತಿಥಿ!: ಬೆಂಗಳೂರು ಮೂಲದ ಇಂಗ್ಲೆಂಡ್‌ನ‌ಲ್ಲಿ ನೆಲೆಸಿದ್ದ ಟೆಕ್ಕಿಯೊಬ್ಬರು ಮದುವೆ ಮಾಡಿಕೊಳ್ಳಲು ಬಂದು ಕೊರೊನಾ ತಪಾಸಣೆಯಿಂದ ಆಸ್ಪತ್ರೆ ಸೇರಿ, ವೈದ್ಯರ ಅತಿಥಿಯಾಗಿದ್ದಾರೆ. ಟೆಕ್ಕಿ, ಮಾರ್ಚ್‌ 11ಕ್ಕೆ ತನ್ನ ಮದುವೆ ನಿಗದಿಯಾಗಿದೆ ಎಂದು ಲಂಡನ್‌ನಿಂದ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ನಿಲ್ದಾಣದಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಜ್ವರ, ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೇರವಾಗಿ ಆತನನ್ನು ರಾಜೀವ್‌ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಲಂಡನ್‌ನಲ್ಲಿ ಎರಡು ಬಾರಿ ಸೋಂಕು ಪರೀಕ್ಷೆಯಾಗಿದ್ದರೂ, ಮತ್ತೂಮ್ಮೆ ಇಲ್ಲಿನ ಆಸ್ಪತ್ರೆಯಲ್ಲಿ ಸೋಂಕು ಪರೀಕ್ಷೆ ಮಾಡಿ, ಕೊರೊನಾ ತಗುಲಿಲ್ಲ ಎಂದು ದೃಢಪಟ್ಟ ಮೇಲೆ ಮಂಗಳವಾರ ಸಂಜೆ ಮನೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next