ಚಾಮರಾಜನಗರ: ಕೋವಿಡ್ ನಿಯಂತ್ರಣಕ್ಕಾಗಿ ಕರ್ತವ್ಯದಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್‌ಗಳು, ಮುಂಚೂಣಿ ಕಾರ್ಯ ಕರ್ತರುಕೋವಿಡ್ ಸೋಂಕಿಗೆ ಒಳಗಾದರೆಚಿಕಿತ್ಸೆ ನೀಡಲು ನಗರದ ಮಾದಾಪುರದಲ್ಲಿರುವ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.
ಸೋಂಕಿತರಿಗಾಗಿ ಜಿಲ್ಲೆಯಲ್ಲಿ ವಿವಿಧಕಡೆ ಕೋವಿಡ್ ಕೇರ್ ಕೇಂದ್ರತೆರೆಯಲಾಗುತ್ತಿದೆ. ಈ ಪೈಕಿ ನಗರದಮಾದಾಪುರದಲ್ಲಿರುವ ಪ್ರಥಮ ದರ್ಜೆಕಾಲೇಜಿನ ಹಾಸ್ಟೆಲ್ ನಲ್ಲೂ ಕೋವಿಡ್ ಕೇಂದ್ರ ಸಜ್ಜುಗೊಳಿಸಲಾಗಿದೆ.
ಕೊರೊನಾವಾರಿಯರ್ಸ್‌ಗಳಿಗಾಗಿಯೇ ಈ ಕೋವಿಡ್ ಕೇರ್ ಸೆಂಟರ್ ಸೌಲಭ್ಯಒದಗಿಸುವ ಮೂಲಕ ಚಾಮರಾಜನಗರ ಜಿಲ್ಲೆ ಕೊರೊನಾ ವಾರಿಯರ್ಸ್‌ಗಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸೌಕರ್ಯ ನೀಡಿ ರಾಜ್ಯದಲ್ಲೇಮೊದಲು ಎನಿಸಿದೆ. ಕೋವಿಡ್ ಕೇರ್ ಕೇಂದ್ರದಲ್ಲಿ ಒಟ್ಟು 19 ಕೊಠಡಿಗಳಿದ್ದು56 ಹಾಸಿಗೆಗಳು ಲಭ್ಯವಿದೆ.
ಈ ಪೈಕಿ 50 ಹಾಸಿಗೆಗಳನ್ನು ಕೊರೊನಾ ವಾರಿಯರ್ಸ್‌ಗಳಿಗಾಗಿ ಇಡಲಾಗಿದೆ. ಸ್ನಾನಕ್ಕಾಗಿ ಸೋಲಾರ್ ವ್ಯವಸ್ಥೆ, ಕುಡಿಯಲುಬಿಸಿನೀರು ಸೌಲಭ್ಯವಿದೆ. ಟಿ.ವಿ., ಯುಪಿಎಸ್ ವ್ಯವಸ್ಥೆಯೂ ಲಭ್ಯವಿದೆ.