Advertisement

ಸೋಂಕಿತ ಮಕ್ಕಳಿಗೆ ಪ್ರತ್ಯೇಕ ಆರೈಕೆ ಕೇಂದ್ರ

08:05 PM May 26, 2021 | Team Udayavani |

ಬೆಂಗಳೂರು: ನಗರದಲ್ಲಿ ಕೊರೊನಾ 3ನೇ ಅಲೆಗೆಪಾಲಿಕೆಯು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿಮಕ್ಕಳ ಆರೈಕೆ ಕೇಂದ್ರಗಳನ್ನು ತೆರಯಲು ಸಿದ್ಧತೆಮಾಡಿಕೊಳ್ಳುತ್ತಿದೆ.ನಗರದ ವಿವಿಧೆಡೆ ಬಿಬಿಎಂಪಿ, ಜಿಲ್ಲಾಡಳಿತ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಕ್ಕಳಕೋವಿಡ್‌ ಆರೈಕೆ ಕೆಂದ್ರ ಮತ್ತು ಕ್ವಾರಂಟೈನ್‌ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

Advertisement

ಸೋಂಕಿತ 18 ವರ್ಷದೊಳಗಿನ ಮಕ್ಕಳು,ಪಾಲಕರಿಗೆ ಸೋಂಕು ಆಸ್ಪತ್ರೆಗೆ ದಾಖಲಾಗಿದ್ದಲ್ಲಿಅಂತಹ ಮಕ್ಕಳ ಆರೈಕೆಗೆ ಕೋವಿಡ್‌ ಆರೈಕೆ ಕೇಂದ್ರಆರಂಭಿಸಲಾಗಿದೆ. 6 ರಿಂದ 11 ವರ್ಷದೊಳಗಿನಮಕ್ಕಳಿಗೆ ಒಂದೇ ಕಡೆ ಆರೈಕೆ ಮಾಡಲಾಗುತ್ತದೆ.ಇನ್ನು12 ರಿಂದ18ವರ್ಷದೊಳಗಿನಬಾಲಕಿಯರುಮತ್ತು ಬಾಲಕರಿಗೆ ಪ್ರತ್ಯೇಕ ಆರೈಕೆ ವ್ಯವಸ್ಥೆ ಇರಲಿದೆ.

ಪಾಲಕರು ಸೋಂಕಿಗೆ ಒಳಗಾಗಿದ್ದು, ಮಕ್ಕಳನ್ನುನೋಡಿಕೊಳ್ಳಲು ವ್ಯವಸ್ಥೆ ಇಲ್ಲದಿದ್ದರೂ ಅವರನ್ನುಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತರೆಂದುಪ್ರತ್ಯೇಕಕ್ವಾರಂಟೈನ್‌ ಕೇಂದ್ರದಲ್ಲಿ ಆರೈಕೆ ಕೇಂದ್ರದಲ್ಲಿ ಇರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮೆಡಹಳ್ಳಿಯಲ್ಲಿ 75 ಹಾಸಿಗೆ ಕೇಂದ್ರ: ಮೆಡಹಳ್ಳಿಯಲ್ಲಿ ಡ್ರೀಮ್‌ ಇಂಡಿಯಾ ನೆಟ್‌ವರ್ಕ್‌(ಡಿಐಎನ್‌) ಎಂಬ ಖಾಸಗಿ ಸಂಸ್ಥೆ ಸಹಯೋಗದಲ್ಲಿ50 ಹಾಸಿಗೆ ಸಾಮರ್ಥ್ಯದ ಮಕ್ಕಳ ಕೋವಿಡ್‌ ಆರೈಕೆಕೇಂದ್ರ ಆರಂಭಿಸಲಾಗಿದೆ. ಪ್ರತಿನಿತ್ಯ ಊಟ, ಔಷಧಹಾಗೂ ಕೆಲವು ಆಟಗಳನ್ನು ಆಡಿಸಲಾಗುತ್ತಿದೆ.ಇನ್ನೂ 25 ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆಎಂದು ಮಾಹಿತಿ ನೀಡಿದರು.

ನಾಲ್ಕು ದಿಕ್ಕುಗಳಲ್ಲಿ ಕೇಂದ್ರ ಆರಂಭ: ಸೋಂಕಿತ ಮಕ್ಕಳಿಗೆ ಆರೈಕೆ ಕೇಂದ್ರ, ದ್ವಿತೀಯ ಸಂಪರ್ಕಿತರಿಗೆ ಕ್ವಾರಂಟೈನ್‌ ಕೇಂದ್ರ, ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಆಶ್ರಯತಾಣನಿರ್ಮಿಸಲಾಗುತ್ತಿದೆ. ಕೆ.ಆರ್‌.ಪುರ, ಬನ್ನೇರುಘಟ್ಟ,ಹೊಸೂರು ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲಿಆರೈಕೆಕೇಂದ್ರ ಆರಂಭಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next