Advertisement
ವಾರ್ಡ್ ಸಮಿತಿ ಸಭೆ ನಡೆಸಬೇಕು ಮತ್ತು ಸಭೆ ನಡೆದ ಬಳಿಕ ಯಾವ ಕ್ರಮದಲ್ಲಿ ಮುಂದುವರೆಯಬೇಕು ಎಂಬ ಬಗ್ಗೆ ಆ್ಯಕ್ಟ್‌ನಲ್ಲಿ ಉಲ್ಲೇಖೀಸಲಾಗಿದೆ. ಆದರೆ ಸಭೆ ಯಾವ ರೀತಿ ನಡೆಯಬೇಕು, ಯಾವ ಹಂತ ಒಳಗೊಂಡಿರಬೇಕು ಎಂಬ ಬಗ್ಗೆ ಯಾವುದೇ ಉಲ್ಲೇಖ ನೀಡಲಿಲ್ಲ. ಇದೇ ಕಾರಣಕ್ಕೆ ನಗರದ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಸಭೆಗಳು ಏಕ ರೂಪದಿಂದ ಕೂಡಿಲ್ಲ. ಸಭೆಯಲ್ಲಿ ಯಾವ ವಿಷಯ ಪ್ರಸ್ತಾವಿಸಬೇಕು ಎಂಬ ಬಗ್ಗೆ ಇನ್ನೂ ಯಾವುದೇ ರೀತಿಯ ಬೈಲಾ ಇಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಪ್ರತ್ಯೇಕ ಬೈಲಾ ಹೊರಡಿಸುವಂತೆ ಆಗ್ರಹ ಕೇಳಿಬಂದಿದೆ. ಬೈಲಾ ರೂಪಿಸಲು ಪಾಲಿಕೆಯೂ ಮುಂದಾಗಿದ್ದು, ಇದನ್ನು ಆಧರಿಸಿ, ವಾರ್ಡ್ ಸಮಿತಿ ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾವನೆಗೆ ಅನುಕೂಲವಾಗಲಿದೆ.
Related Articles
Advertisement
ಗ್ರಾಮೀಣ ಪ್ರದೇಶಗಳಲ್ಲಿ ಯಾವ ರೀತಿ ಗ್ರಾಮ ಸಭೆ ನಡೆಯುತ್ತದೆಯೋ ಅದೇ ರೀತಿ, ಮಂಗಳೂರು ಪಾಲಿಕೆ ವ್ಯಾಪ್ತಿ ಏರಿಯಾ ಸಭೆ ನಡೆಯಬೇಕಿದೆ. ಏರಿ ಯಾ ಸಭಾಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಗತ್ಯವಿದ್ದು, ಶೀಘ್ರ ಈ ಪ್ರಕ್ರಿಯೆ ನಡೆಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಕೇಳಿ ಬಂದಿವೆ. ಆದರೆ ಈಗಾಗಲೇ ರಚನೆಯಾದ ವಾರ್ಡ್ ಸಮಿತಿ ಸದಸ್ಯರ ನೇಮಕಾತಿ ಇನ್ನೂ ಪೂರ್ಣವಾಗಿಲ್ಲ. ಹೀಗಿದ್ದಾಗ ಏರಿಯಾ ಸಭಾಗಳ ರಚನೆ ಸುಲಭವಲ್ಲ ಎನ್ನುವ ನಿರ್ಧಾರಕ್ಕೆ ಪಾಲಿಕೆ ಬಂದಿದೆ. ಕಳೆದ ತಿಂಗಳು ಪಾಲಿಕೆ ಸಾಮಾನ್ಯ ಸಭೆಯಲ್ಲೂ ಈ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಈ ಗೊಂದಲಗಳನ್ನು ನಿವಾರಿಸಿದ ಬಳಿಕವೇ ಏರಿಯಾ ಸಭಾ ರಚನೆಗೆ ಮುಂದಾಗುವಂತೆ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಏರಿಯಾ ಸಭಾ ರಚನೆ ಅನುಮಾನ ಎನ್ನಲಾಗಿದೆ.
ಸದ್ಯದಲ್ಲೇ ಬೈಲಾ: ಪಾಲಿಕೆ ವಾರ್ಡ್ ಸಮಿ ತಿ ಸಭೆ ಯಾವ ರೀತಿ ನಡೆಯಬೇಕು ಮತ್ತು ಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬೈಲಾ ಹೊರಡಿಸುವಂತೆ ಈಗಾಗಲೇ ಮನವಿ ಬಂದಿದೆ. ಈ ಕುರಿತಂತೆ ಪಾಲಿಕೆಯಿಂದ ಸದ್ಯದಲ್ಲೇ ಬೈಲಾ ಹೊರಡಿಸುತ್ತೇವೆ. – ಅಕ್ಷಯ್ ಶ್ರೀಧರ್, ಪಾಲಿಕೆ ಆಯುಕ್ತರು