Advertisement

ಮಹಿಳೆಯರಿಗಾಗಿ ಸಖಿ ಮತಗಟ್ಟೆ

12:58 PM Mar 27, 2019 | Team Udayavani |

ಕೆಜಿಎಫ್: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ಮಹಿಳೆಯರಿಗಾಗಿ ಕಮ್ಮಸಂದ್ರ ಮತ್ತು ಇಟಿ ಬ್ಲಾಕ್‌ನಲ್ಲಿ ಸಖೀ ಮತಗಟ್ಟೆಗಳನ್ನು ತರೆಯಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ಹೇಳಿದರು.

Advertisement

ನಗರಸಭೆಯಲ್ಲಿ ಸ್ವೀಪ್‌ ಸಮಿತಿ ಸದಸ್ಯರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿ ಕಾರ್ಯನಿರ್ವಹಿಸುವವರೆಲ್ಲರೂ ಮಹಿಳೆಯರೇ ಆಗಿರುವುದು ವಿಶೇಷ. ಅದೇ ರೀತಿಯಲ್ಲಿ ಅಂಗವಿಕಲರಿಗೂ ಪ್ರತ್ಯೇಕ ಮತಗಟ್ಟೆಯನ್ನು ಪ್ರಾರಂಭಿಸಲಾಗುವುದು. ಅಲ್ಲಿ ಕೂಡ ಅಂಗವಿಕಲ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು. ಈ ರೀತಿ ಹಲವು ವಿಧದಲ್ಲಿ ಹೆಚ್ಚಿನ ಮತದಾನವಾಗಲು ಪ್ರಯತ್ನ ನಡೆಸಲಾಗುತ್ತಿದೆ. ಸರ್ವರೂ ಸಹಕರಿಸಬೇಕು ಎಂದು ಹೇಳಿದರು.

ಎಲ್ಲಾ 234 ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್‌ ನೀಡುತ್ತಿದ್ದೇವೆ. ನಗರ ಮಟ್ಟದಲ್ಲಿ ಮತದಾನ ಜಾಗೃತಿ ಮೂಡಿಸಲು ಹಲವು ವಿಧಾನದಲ್ಲಿ ಕೆಲಸ ಮಾಡಬೇಕಾಗಿದೆ. ಮತದಾನ ಮಾಡಲು ಆಂದೋಲನವನ್ನು ಸೂರಜ್‌ಮಲ್‌ ವೃತ್ತದಲ್ಲಿ ನಡೆಸುತ್ತೇವೆ. ಮತದಾರರಿಗೆ ಆಹ್ವಾನ ಪತ್ರ ನೀಡುತ್ತೇವೆ. ಹೆಚ್ಚಿನ ಮತದಾನವಾಗಲು ಎಲ್ಲಾ ರೀತಿಯ ತಂತ್ರಗಳನ್ನು ಅನುಸರಿಸಬೇಕು ಎಂದರು.

ಸ್ವೀಪ್‌ ಸಮಿತಿಯ ಉದ್ದೇಶ ಮತದಾನ ಮಾಡಲು ಏನೂ ಸಾಧ್ಯವೋ ಅಷ್ಟನ್ನೂ ಮಾಡಲಾಗುವುದು. ಸಂತೆಗಳಲ್ಲಿ ಭಾಗವಹಿಸಿ, ಪ್ರಚಾರ ಮಾಡಿ ಎಂದು ಸದಸ್ಯರಿಗೆ ತಿಳಿಸಿದರು. ನಗರಸಭೆ ಆವರಣದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಜೆ ಪಂಜಿನ ಮೆರವಣಿಗೆ ನಡೆಯಿತು. ಸ್ಕೂಲ್‌ ಆಫ್ ಮೈನ್ಸ್‌ನಲ್ಲಿ ಅರಿವು ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದರು. ತಹಶೀಲ್ದಾರ್‌ ಕೆ.ರಮೇಶ್‌, ಅಶ್ವತ್ಥ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next