Advertisement

ಪ್ರಾಥಮಿಕ-ಪ್ರೌಢ ಶಿಕ್ಷಣಕ್ಕೂ ಎಸ್‌ಇಪಿ: ಸಚಿವ ಮಧು ಬಂಗಾರಪ್ಪ

12:30 AM Jul 12, 2023 | Team Udayavani |

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿಯೂ ರಾಜ್ಯ ಶಿಕ್ಷಣ ಕ್ರಮವನ್ನು ಜಾರಿಗೊಳಿಸುವ ಚಿಂತನೆ ನಡೆಸಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Advertisement

ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿದೆ. ಅದನ್ನು ರಾಜ್ಯ ಶಿಕ್ಷಣ ಕ್ರಮಕ್ಕೆ ಬದಲಾಯಿಸುವುದಾಗಿ ಈಗಾಗಲೇ ಹೇಳಿದ್ದೇವೆ. ಇದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೂ ವಿಸ್ತರಿಸುವ ಬಗ್ಗೆ ಸಮಿತಿ ರಚಿಸಿ ವರದಿ ಪಡೆಯುತ್ತೇವೆ ಎಂದು ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಮಂಗಳ  ವಾ ರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಸದ್ಯವೇ ಹೊಸ ಸಮಿತಿ
ಪಠ್ಯಪುಸ್ತಕವನ್ನು ರಾಜಕೀಯ ದೃಷ್ಟಿಯಿಂದ ಅಲ್ಲ, ಮಕ್ಕಳ ಹಿತದೃಷ್ಟಿಯಿಂದ ಪರಿಷ್ಕರಿಸಿದ್ದೇವೆ. ಪಠ್ಯ ಪುಸ್ತಕ ದಲ್ಲಿ ಸ್ಥಾನ ಪಡೆಯಲು ಅರ್ಹವಲ್ಲದ ಮೂರು ಪಠ್ಯಗಳನ್ನು ಕೈಬಿಟ್ಟಿದ್ದೇವೆ. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಗಳನ್ನು ಇನ್ನೊಮ್ಮೆ ಪರಿಷ್ಕರಣೆ ನಡೆಸುತ್ತೇವೆ. ಸುಮಾರು 45 ಆಕ್ಷೇಪಾರ್ಹ ಅಂಶಗಳಿದ್ದು, ನಾವು ಈಗ ಕೇವಲ 3 ಪಠ್ಯಗಳನ್ನು ಕೈ ಬಿಟ್ಟಿದ್ದೇವೆ. ಉಳಿದಂತೆ ಆಕ್ಷೇ ಪಾರ್ಹ ಪದ, ವಾಕ್ಯಗಳನ್ನು ಪರಿಷ್ಕರಿಸಿಲ್ಲ. ಆದರೆ ಇನ್ನೊಂದು ತಿಂಗಳಿನಲ್ಲಿ ಪಠ್ಯ ಪರಿಷ್ಕರಣೆಗೆ ಹೊಸ ಸಮಿತಿ ರಚಿಸಲಿದ್ದೇವೆ. ಸಮಿತಿಗೆ ಸದಸ್ಯ ರನ್ನು ನೇಮಿಸಲು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದರು.

ಅನಧಿಕೃತ ಶಾಲೆಗಳಿಗೆ ತಮ್ಮ ಅಕ್ರಮಸರಿಪಡಿಸಲು ನೀಡಿದ್ದ ಸಮಯವನ್ನು ವಿಸ್ತರಿಸಿದ್ದೇವೆ. ತಪ್ಪುಗಳನ್ನು ಸರಿ ಪಡಿಸುವಂತೆ ಹೇಳಿದ್ದೇವೆ. ಏಕಾ ಏಕಿ ಶಾಲೆ ಗಳನ್ನು ಮುಚ್ಚುವುದು ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ಒಳ್ಳೆಯ ದಲ್ಲ. ಆದರೆ ಇನ್ನು ಮುಂದೆ ಅನಧಿಕೃತ ಶಾಲೆಗಳಿಗೆ ಅವಕಾಶ ನೀಡುವುದಿಲ್ಲ ಎಂದರು.

ಈ ತಿಂಗಳೊಳಗೆ ವರ್ಗಾವಣೆ
ಪ್ರಕ್ರಿಯೆ ಮುಕ್ತಾಯಗೊಳಿಸು ತ್ತೇವೆ. 87 ಸಾವಿರ ಶಿಕ್ಷಕರ ವರ್ಗಾ ವಣೆ ಅರ್ಜಿಗಳಿದ್ದು, ಸುಮಾರು 25 ಸಾವಿರ ಶಿಕ್ಷಕರ ವರ್ಗಾವಣೆ ನಡೆಯಲಿದೆ. ಹಿಂದಿನ ಸರಕಾರ ವಿಳಂಬ ಮಾಡಿದ್ದರಿಂದ ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ವರ್ಗಾವಣೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next