ಸಿಯೋಲ್: ದಕ್ಷಿಣ ಕೊರಿಯಾ ಸಿಯೋಲ್‌ನಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೇ ದಿನ ಸಿಯೋಲ್ ಒಂದರಲ್ಲೇ ರವಿವಾರ 397 ಪ್ರಕರಣಗಳು ಪತ್ತೆಯಾಗಿವೆ. ಬಹುತೇಕ ಪ್ರಕರಣಗಳು ಅತಿ ಹೆಚ್ಚು ಜನಸಂಖ್ಯೆಯಿರುವ ಸಿಯೋಲ್‌ನಲ್ಲಿಂದಲ್ಲೇ ವರದಿಯಾಗುತ್ತಿದ್ದು, ಶಾಲೆ, ಚರ್ಚ್, ರೆಸ್ಟೋರೆಂಟ್, ಕಚೇರಿಗಳು ಸೋಂಕು ಹರಡುವ ಪ್ರಮುಖ ಸ್ಥಳಗಳಾಗಿವೆ. ಬುಸನ್, ಗ್ವಾಂಗ್ಜು, ಡೇಜಿಯಾನ್, ಸೀಜಾಂಗ್, ಡೇಗೂನಲ್ಲಿ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು, ಒಟ್ಟು 17,665 ಪ್ರಕರಣಗಳಿವೆ.
309 ಮಂದಿ ಸಾವು
ಸಿಯೋಲ್‌ನಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗಲು ಚರ್ಚ್‌ಗಳೇ ಮುಖ್ಯ ಕಾರಣವಾಗಿದ್ದು, ನೈಟ್ ಕ್ಲಬ್, ಕರಾವೋಕ್ ಬಾರ್ಸ್, ಬಫೆಟ್ ರೆಸ್ಟೋರೆಂಟ್‌ಗಳು, ಕಂಪ್ಯೂಟರ್ ಗೇಮಿಂಗ್ ಕೆಫೆಗಳನ್ನು ಮತ್ತೆ ಬಂದ್ ಮಾಡಲಾಗಿದೆ.
ಜಿಯಾಂಗ್‌ನಲ್ಲಿ ಪ್ರತಿನಿತ್ಯ 50 ಸಾವಿರ ಪರೀಕ್ಷೆಗಳನ್ನು ಮಾಡಿಸಲಾಗುತ್ತಿದ್ದು, ಈ ಹಿಂದೆ ದಿನಕ್ಕೆ 20 ಸಾವಿರ ಪರೀಕ್ಷೆಗಳನ್ನು ಮಾತ್ರ ಮಾಡಲಾಗುತ್ತಿತ್ತು. ಏಕಕಾಲದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸುವುದು ಮತ್ತು 24ಗಂಟೆಯಲ್ಲಿ ಪರೀಕ್ಷಾ ವರದಿಯನ್ನು ತರಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ, ಒಂದು ಹಂತಕ್ಕೆ ಕೋವಿಡ್ ವಿರುದ್ದ ದಕ್ಷಿಣ ಕೊರಿಯಾ ಗೆದ್ದಿತ್ತು. ಎರಡು ತಿಂಗಳ ಹಿಂದೆ ಅತಿಹೆಚ್ಚು ಸೋಂಕಿತರನ್ನು ಹೊಂದಿದ್ದ ದಕ್ಷಿಣ ಕೊರಿಯಾ, ಮೊನ್ನೆಮೊನ್ನೆಯ ವರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿತ್ತು.