ಕೊರಟಗೆರೆ: ತವರು ಮನೆಗೆ ಆಗಮಿಸಿದ್ದ ಹೆಂಡತಿಯ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ್ದ ಗಂಡನಿಗೆ ಮಧುಗಿರಿಯ 4ನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 60,000 ಸಾವಿರ ದಂಡ ವಿಧಿಸಿದೆ.
ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಜಾಲ ಹೋಬಳಿ ಮಾರಸಂದ್ರ ಗ್ರಾಮದ ವಾಸಿಯಾದ ಮೂರ್ತಪ್ಪನ ಮಗನಾದ ಹರೀಶ್(34) ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ.
ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿಯ ಮುದ್ದನಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರ ಮನೆಗೆ ಗೌರಿ ಹಬ್ಬಕ್ಕೆ ಆಗಮಿಸಿದ ವೇಳೆ ಅನೈತಿಕ ಸಂಭಂದದ ಅನುಮಾನ ಪಟ್ಟು, ಹರೀಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಬಳಿಕ ಆರೋಪಿಯನ್ನು ಬಂಧಿಸಿ, ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈತನ ವಿರುದ್ದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಸಿಪಿಐ ಚಂದ್ರಶೇಖರ್ 2014ರ ಸೆಪ್ಟೆಂಬರ್ 2 ರಂದು ಪ್ರಕರಣ ದಾಖಲಿಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಧುಗಿರಿ 4ನೇ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ತಾರಾಕೇಶ್ವರಗೌಡ ಪಾಟೀಲ್, ಕೊಲೆ ಆರೋಪಿ ಹರೀಶನಿಗೆ ಜೀವಾವಧಿ ಶಿಕ್ಷೆ ಮತ್ತು 60 ಸಾವಿರ ರೂ ದಂಡ ವಿಧಿಸಿ, ಆದೇಶ ನೀಡಿದ್ದಾರೆ.
ದಂಡದ ಹಣದಲ್ಲಿ50 ಸಾವಿರವನ್ನು ಮೃತಳ ತಾಯಿಗೆ ಪರಿಹಾರವಾಗಿ ನೀಡಲು ಆದೇಶಿದ್ದಾರೆ. ಸರ್ಕಾರಿ ಅಭಿಯೋಜಕ ನಿರಂಜನಮೂರ್ತಿ ವಾದ ಮಂಡಿಸಿದ್ದಾರೆ.