Advertisement

ಸೋಂಕು ಪತ್ತೆಗೆ ಸೆನ್ಸಾರ್‌ ಅಭಿವೃದ್ಧಿ

03:31 PM May 10, 2020 | sudhir |

ಅಮೆರಿಕ : ಕೋವಿಡ್‌-19 ಸೋಂಕು ಹರಡುವಿಕೆ ತಡಗಟ್ಟಲು ಮತ್ತು ಸೋಂಕಿತರನ್ನು ಪತ್ತೆ ಹಚ್ಚಲು ನೆರವಾಗುವಂತಹ ಸೆನ್ಸಾರ್‌ಗಳನ್ನು ಅಭಿವೃದ್ಧಿಪಡಿಸುವಂತೆ ಯುಸ್‌ ಸೈನ್ಯ ತಂತ್ರಜ್ಞಾನ ಕಂಪನಿಗಳ ಎದುರು ಮನವಿ ಇಟ್ಟಿದ್ದು, ಯೋಜನೆಯ ಒಪ್ಪಂದಕ್ಕೂ ಮುಂದಾಗಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

Advertisement

ಈ ಹಿನ್ನಲೆಯಲ್ಲಿ ಸುಮಾರು 2.5ಕೋಟಿ ಮೊತ್ತವನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಲಭ್ಯವಿರುವ ಯಂತ್ರೋಪಕರಣಗಳನ್ನು ಬಳಸಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸೂಚಿಸಿದೆ. ಯೋಜನೆಗೆ ಸಂಬಂಧಪಟ್ಟಂತೆ ಮಾರ್ಗ ಸೂಚಿಗಳನ್ನು ಈ ವಾರದೊಳಗೆ ಸಲ್ಲಿಸುವಂತೆ ಹೇಳಿದೆ.

ವೇಗವಾಗಿ ಸೋಂಕನ್ನು ಪತ್ತೆ ಹಚ್ಚುವ ಮತ್ತು ಸೋಂಕನ್ನು ದೃಢಪಡಿಸುವ ಅವಶ್ಯಕತೆ ಇದ್ದು, ಅಗತ್ಯವಾಗಿ ಸೋಂಕು ಪ್ರಸರಣ ಮಟ್ಟವನ್ನು ತಡೆಗಟ್ಟಬೇಕಿದೆ. ಅಲ್ಲದೇ ಪ್ರಾರಂಭಿಕ ಮಟ್ಟದಲ್ಲಿಯೇ ಸೋಂಕು ಇರುವುದು ಪತ್ತೆಯಾದರೇ ಹರಡುವಿಕೆಯನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚುವ ಸೋಂಕು ತಂತ್ರಜ್ಞಾನದ ಅವಶ್ಯಕತೆ ಇದೆ ಎಂದು ವೈದ್ಯಕೀಯ ಒಕ್ಕೂಟಕ್ಕೆ ಸೈನ್ಯ ತಿಳಿಸಿದೆ. ಇದರ ಭಾಗವಾಗಿ ಯೋಜನೆ ಜಾರಿಗೆ ಮುಂದಾಗಿದ್ದು, ಸೋಂಕು ಪತ್ತೆ ಹಚ್ಚುವ ಸೆನ್ಸಾರ್‌ಗಳ ತಯಾರಿಕೆ ಶುರುವಾಗಿದೆ. ಇದನ್ನು ಈ ದೇಹದ ಮೇಲೆ ಧರಿಸುವಂತೆ ರೂಪಿಸಲಾಗುತ್ತಿದ್ದು, ವಾಚ್‌, ಶರ್ಟ್‌ ಅಥವಾ ಬೆಲ್ಟ್ ಗಳ ಮೇಲೆ ಧರಿಸುವಂತೆ ಸಿದ್ಧಪಡಿಸಲಾಗುತ್ತಿದೆ. ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವಂತಹ ತಂತ್ರಗಾರಿಕೆಯನ್ನು ಈ ಸೆನ್ಸಾರ್‌ಗಳಲ್ಲಿ ಅಳವಡಿಸಲಾಗುತ್ತದೆ ಎನ್ನಲಾಗುತ್ತಿದೆ. ಸಾರ್ವಜನಿಕ ಸಾರಿಗೆ, ವಿಮಾನ ನಿಲ್ದಾಣಗಳು ಮತ್ತು ಕಟ್ಟಡ ನಿರ್ಮಾಣ ಹಂತದ ಪ್ರದೇಶಗಳಲ್ಲಿ ಹೆಚ್ಚಿನ ಜನ ದಟ್ಟಣೆ ಸೇರಲಿದ್ದು, ಅಂತಹ ಪ್ರದೇಶಗಳಿಗೆ ಇದು ಉಪಯುಕ್ತವಾಗಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next