Advertisement

ಸೂಳೆಕೆರೆ ಸಂರಕಣೆಗೆ ಸುಶಿಕ್ಷೀತರ ಪಡೆ

04:35 PM Jun 03, 2018 | Team Udayavani |

ದಾವಣಗೆರೆ: ಸೂಳೆಕೆರೆ ಸಂರಕ್ಷಣೆಗೆ ಹಮ್ಮಿಕೊಂಡಿರುವ ಹೋರಾಟಕ್ಕೆ ಜಿಲ್ಲೆಯ ಜನರು ಕೈ ಜೋಡಿಸಬೇಕು ಎಂದು
ಖಡ್ಗ ಸಂಘದ ನಿರ್ದೇಶಕರು ಮನವಿ ಮಾಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿರ್ದೇಶಕ, ಸಾಫ್ಟ್‌ವೇರ್‌ ಇಂಜಿನಿಯರ್‌ ಬಿ. ರಘು, ಸೂಳೆಕೆರೆ(ಶಾಂತಿಸಾಗರ) ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುತ್ತಿದೆ. ಜೊತೆಗೆ ನೀರಾವರಿಗೂ ಸಹ ಸಹಕಾರಿಯಾಗಿದೆ.

Advertisement

ಅಂತಹ ಕೆರೆ ಇದೀಗ ಅಳಿವಿನಂಚಿಗೆ ಸಾಗುತ್ತಿದೆ. ದಿನದಿಂದ ದಿನಕ್ಕೆ ಕೆರೆಯ ಗಾತ್ರ ಕ್ಷೀಣಿಸುತ್ತಿದೆ. ನಮ್ಮ ಸಂಸ್ಥೆ ಇದೀಗ ಕೆರೆಯ ಉಳಿವಿಗೆ ಹೋರಾಟ ರೂಪಿಸಿದ್ದು, ಜನರು ನಮ್ಮೊಂದಿಗೆ ಕೈ ಜೋಡಿಸಬೇಕೆಂದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
 
ಇದರ ಜೊತೆಗೆ ಸಿರಿಗೆರೆ ಮಠದಲ್ಲಿನ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನ್ಯಾಯಪೀಠದಲ್ಲೂ ಸಹ
ಅರ್ಜಿ ಹಾಕಲಾಗಿದೆ. ಜುಲೈ 2ರಂದು ಸ್ವಾಮೀಜಿಗಳು ಈ ಕುರಿತು ಸಭೆ ಕರೆದಿದ್ದಾರೆ. 

ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು. ಕೆಲವೇ ಕೆಲವರ ಹಿತಕ್ಕಾಗಿ ಒಂದು ಐತಿಹಾಸಿಕ ಕೆರೆ ನಾಶವಾಗಬಾರದು. ಇದನ್ನು ಉಳಿಸಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಇದು ಏಷಿಯಾದ 2ನೇ ಅತಿದೊಡ್ಡ ಕೆರೆಯಾಗಿದೆ. ಇಲ್ಲಿ ಶೇಖರಣೆಯಾಗುವ ನೀರು ಕುಡಿಯಲು ಯೋಗ್ಯವಾದುದಾಗಿದೆ. ಈ ಕೆರೆಯ ಒಟ್ಟು ವಿಸೀ¤ರ್ಣ 6650 ಎಕರೆ ಪ್ರದೇಶವಾಗಿದೆ. ಆದರೆ, ಇದೀಗ ಇದರ ವಿಸ್ತೀರ್ಣ 5000 ಎಕರೆಗೆ ಇಳಿದಿದೆ.

ಅಂದಾಜಿನ ಪ್ರಕಾರ 1650 ಎಕರೆ ಪ್ರದೇಶ ಒತ್ತುವರಿಯಾಗಿದೆ. ಹಿರೇಹಳ್ಳ ಅಂತಲೂ ಗುರುತಿಸಲ್ಪಡುವ ಈ ಕೆರೆ ನಿರ್ಮಾಣ ಆಗಿದ್ದು 12ನೇ ಶತಮಾನ ಎಂದು ಹೇಳಲಾಗುತ್ತಿದೆ. ಬಸವನತೂಬು, ಸಿದ್ದನತೂಬು ಮೂಲಕ
ನೀರಿನ ಹೊರಹರಿವು ಆಗುತ್ತಿದೆ ಎಂದು ಅವರು ತಿಳಿಸಿದರು.
 
ಇದೀಗ ಕೆರೆ ಹೂಳು ತುಂಬಿಕೊಂಡಿದೆ. 2015ರಲ್ಲಿ ಕೆರೆ ಸಂಪೂರ್ಣ ಬತ್ತಿಹೋಗಿತ್ತು. ಈ ಹಿಂದಿನ ವರ್ಷ ಮಳೆ ಕೈಗೊಟ್ಟಾಗ ಸೂಳೆಕೆರೆಯ ನೀರನ್ನೇ ಅಡಕೆ, ತೆಂಗು ಮುಂತಾದ ತೋಟಗಳಿಗೆ ಹರಿಸಲಾಗಿದೆ. ಈ ಕೆರೆಯಿಂದ 4700 ಎಕರೆ ಪ್ರದೇಶ ನೀರಾವರಿಗೊಂಡಿದೆ. ಇಂತಹ ಕೆರೆಯ ಬಗ್ಗೆ ನಮ್ಮವರಿಗೆ ಕಾಳಜಿ ಇಲ್ಲದಂತಾಗಿದೆ. ನಮ್ಮ ಸಂಪತ್ತನ್ನು ನಾವೇ ರಕ್ಷಿಸಿಕೊಳ್ಳಬೇಕು. ಇದಕ್ಕೆ ಜಿಲ್ಲೆಯ ಜನರು ಬೆಂಬಲ ನೀಡಬೇಕೆಂದು ಅವರು ಕೋರಿದರು.
 
ನಮ್ಮ ಸಂಘಟನೆಯಲ್ಲಿರುವವರ ಪೈಕಿ ಬಹುತೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು, ಉನ್ನತ ಶಿಕ್ಷಣ ಪಡೆದವರಾಗಿದ್ದೇವೆ. ಸಮಾಜದ ಒಳಿತಿಗಾಗಿ ಏನನ್ನಾದರೂ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯ ಆರಂಭಿಸಿದ್ದೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಸೂಳೆಕೆರೆ ಉಳಿಸುವುದಾಗಿದೆ. ಜಿಲ್ಲೆಯಲ್ಲಿರುವ ಪ್ರಾಚೀನ, ಪ್ರವಾಸ ಯೋಗ್ಯ ಕೆರೆ ಉಳಿಸಬೇಕಾದುದು ಜಿಲ್ಲಾಡಳಿತದ ಕರ್ತವ್ಯ ಸಹ ಆಗಿದೆ ಎಂದು ಅವರು ಹೇಳಿದರು. 

Advertisement

ಸಂಘದ ನಿರ್ದೇಶಕರಾದ ಕುಬೇಂದ್ರಸ್ವಾಮಿ, ಚಂದ್ರಹಾಸ, ಕೆ.ಸಿ. ಬಸವರಾಜ, ಸೈಯದ್‌ ನಯಾಜ್‌, ಪ್ರಶಾಂತ,
ಷಣ್ಮುಖಸ್ವಾಮಿ, ಪ್ರಕಾಶ್‌, ಹರೀಶ್‌ ಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next