Advertisement

ಕೋವಿಡ್ ಲಸಿಕೆ ನಿರೀಕ್ಷೆ ಎಫೆಕ್ಟ್: ಬಾಂಬೆ ಷೇರುಮಾರುಕಟ್ಟೆ ಸೂಚ್ಯಂಕ, ನಿಫ್ಟಿ ದಾಖಲೆಯ ಏರಿಕೆ

06:29 PM Dec 09, 2020 | Nagendra Trasi |

ಮುಂಬೈ: ವಿದೇಶಿ ಬಂಡವಾಳದ ಒಳಹರಿವು ಹಾಗೂ ಕೋವಿಡ್ 19 ಸೋಂಕಿನ ಲಸಿಕೆ ಲಭ್ಯದ ಹಿನ್ನೆಲೆಯಲ್ಲಿ ಬಾಂಬೆ ಷೇರುಮಾರುಕಟ್ಟೆಯಲ್ಲಿ ಬುಧವಾರ(ಡಿಸೆಂಬರ್ 09, 2020) ಭರ್ಜರಿ ವಹಿವಾಟು ನಡೆಯುವ ಮೂಲಕ ದಾಖಲೆಯ ಏರಿಕೆ ಕಂಡಿದೆ. ನಿಫ್ಟಿ ಕೂಡಾ ಸಾರ್ವಕಾಲಿಕ ದಾಖಲೆ ಬರೆದಿದೆ.

Advertisement

ಬಾಂಬೆ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಮೊದಲ ಬಾರಿಗೆ 495 ಅಂಕಗಳ ಏರಿಕೆಯೊಂದಿಗೆ 46,104 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ದಾಖಲೆ ಪ್ರಮಾಣದಲ್ಲಿ ಅಂತ್ಯಗೊಂಡಿದೆ.

ಎನ್ ಎಸ್ ಇ ನಿಫ್ಟಿ ಕೂಡಾ ಬರೋಬ್ಬರಿ 136 ಅಂಕಗಳ ಭರ್ಜರಿ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಎಂಬಂತೆ 13, 529 ಅಂಕಗಳ ವಹಿವಾಟಿನೊಂದಿಗೆ ಮುಕ್ತಾಯ ಕಂಡಿದೆ.

ಬುಧವಾರ ಬೆಳಗ್ಗೆ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ 273.22 ಅಂಕಗಳಷ್ಟು ಏರಿಕೆ ಕಂಡಿದ್ದು, 45,881.73 ಅಂಕಗಳೊಂದಿಗೆ ವಹಿವಾಟು ಆರಂಭಗೊಂಡಿತ್ತು. ನಿಫ್ಟಿ ಕೂಡಾ 78.25 ಅಂಕಗಳಷ್ಟು ಏರಿಕೆಯಾಗಿದ್ದು, 13,471.20 ಅಂಕಗಳೊಂದಿಗೆ ದಾಖಲೆಯ ವಹಿವಾಟು ನಡೆಸಿತ್ತು.

ಇದನ್ನೂ ಓದಿ:ಕೃಷಿ ಕಾಯ್ದೆ- ಕೇಂದ್ರದ ಆಫರ್ ತಿರಸ್ಕರಿಸಿದ ರೈತರು: ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ

Advertisement

ಮಂಗಳವಾರವೂ ಕೂಡಾ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸಾರ್ವಕಾಲಿಕ ಏರಿಕೆ ಕಂಡಿತ್ತು. ಬಿಎಸ್ ಇ ಸೂಚ್ಯಂಕ 181.54ರಷ್ಟಿ ಏರಿಕೆಯಾಗಿದ್ದು, ಮಧ್ಯಾಂತರದಲ್ಲಿ 45,742.23ಕ್ಕೆ ಸೂಚ್ಯಂಕ ಏರಿಕೆಯಾಗಿದ್ದು ದಿನಾಂತ್ಯಕ್ಕೆ 45,608.1 ಅಂಕಗಳಲ್ಲಿ ಮುಕ್ತಾಯಗೊಂಡಿತ್ತು. ನಿಫ್ಟಿ ಕೂಡಾ 13,392.95 ಅಂಕಗಳಿಗೆ ಜಿಗಿದಿತ್ತು.

ಬುಧವಾರ ಷೇರುಪೇಟೆ ಸೂಚ್ಯಂಕ ದಾಖಲೆಯ ಏರಿಕೆ ಕಂಡ ಪರಿಣಾಮ ಐಟಿಸಿ, ಇಂಡಸ್ ಲ್ಯಾಂಡ್ ಬ್ಯಾಂಕ್, ಒಎನ್ ಜಿಸಿ, ಎಚ್ ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಯಿಂಟ್, ಐಸಿಐಸಿಐ ಬ್ಯಾಂಕ್, ಆರ್ ಐಎಲ್, ಬಜಾಜ್ ಆಟೋ, ಎನ್ ಟಿಪಿಸಿ ಮತ್ತು ಟಿಸಿಎಸ್ ಷೇರು ಶೇ.1.70ರಷ್ಟು ಏರಿಕೆ ಕಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next