Advertisement

ಸೌದಿ ಭ್ರಷ್ಟ ನಿಗ್ರಹಕ್ಕೆ ಸೆನ್ಸೆಕ್ಸ್‌ ತಲ್ಲಣ

07:05 AM Nov 08, 2017 | Harsha Rao |

ಮುಂಬಯಿ: ಸೌದಿ ಅರೇಬಿಯಾದ ರಾಜಮನೆ ತನದ ಮಟ್ಟದಲ್ಲಿ ನಡೆದಿರುವ ಬೆಳವಣಿಗೆಗಳು ಮುಂಬೈ ಷೇರು ಪೇಟೆಯಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಅರಬ್‌ ರಾಷ್ಟ್ರದ ವಿದ್ಯಮಾನಗಳಿಂದಾಗಿ ಕಚ್ಚಾ ತೈಲದ ದರ ಏರಿಕೆ ಆಗಲಿದೆಯೇ ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದ್ದು, ಬಹುತೇಕ ಮಂದಿ ಷೇರು ಮಾರಾಟದಲ್ಲಿ ತೊಡಗಿದರು.

Advertisement

 ಪರಿಣಾಮ ಮಂಗಳವಾರ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ 360 ಅಂಕಗಳ ಭಾರೀ ಕುಸಿತ ದಾಖಲಿಸಿ, 33,370ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 101 ಅಂಕ ಇಳಿಕೆಯಾಗಿ, 10,350ರಲ್ಲಿ ಅಂತ್ಯಗೊಂಡಿತು.
ಸೌದಿಯ ಭಾವೀ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅಲ್ಲಿನ ಭ್ರಷ್ಟ ರಾಜಕುಮಾರರು, ಸಚಿವರ ವಿರುದ್ಧ ಕೈಗೊಂಡ ಕ್ರಮಗಳ ಪರಿಣಾಮ, ರಾತ್ರಿ ಬೆಳಗಾಗುವುದರೊಳಗೆ ಕಚ್ಚಾ ತೈಲದ ದರ ಶೇ.3.5 ರಷ್ಟು ಏರಿಕೆಯಾಗಿತ್ತು. ಜುಲೈ 2015ರ ನಂತರ ಇಷ್ಟೊಂದು ಏರಿಕೆ ಆಗಿದ್ದು ಇದೇ ಮೊದಲು. ತೈಲ ದರದ ಏರಿಕೆ ಭಾರತದಂತಹ ತೈಲ ಆಮದು ಮಾಡುವ ದೇಶಗಳಿಗೆ ಸಮಸ್ಯೆ ಆಗಲಿದ್ದು, ಹಣದುಬ್ಬರ, ವಿತ್ತೀಯ ಲೆಕ್ಕಾಚಾರದಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next