ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರ 713.53 ಅಂಕಗಳ ಭಾರೀ ನಷ್ಟದೊಂದಿಗೆ 34,959.72 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ನಾಳೆ ಮಂಗಳವಾರ ಪ್ರಕಟಗೊಳ್ಳಲಿರುವ ಪಂಚ ರಾಜ್ಯ ಚುನಾವಣೆಗಳ ಫಲಿತಾಂಶಕ್ಕೆ ಮುನ್ನವೇ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಗೆ, ಜಾಗತಿಕ ಪೇಟೆಗಳಲ್ಲಿನ ದೌರ್ಬಲ್ಯ, ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಕುಸಿತ ಮತ್ತು ಅಮೆರಿಕ-ಚೀನ ವಾಣಿಜ್ಯ ಸಮರ ಮತ್ತೆ ತೀವ್ರಗೊಳ್ಳುವ ಭೀತಿ ತೀವ್ರವಾಗಿ ಕಾಡಿತು.
ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದು 205.25 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,488.45 ಅಂಕಗಳ ಮಟ್ಟಕ್ಕೆ ಕುಸಿದು ನಿರಾಶಾದಾಯವಾಗಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯ ನೋಂದಾಯಿತ ಕಂಪೆನಿಗಳ ಮಾರುಕಟ್ಟೆ ಬಂಡವಳೀಕರಣವು ಇಂದು 2,52,478.89 ಕೋಟಿ ಯಿಂದ 1,37,90,774.75 ರೂ ಮಟ್ಟಕ್ಕೆ ಕುಸಿಯಿತು. ಇಂದಿನ ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 2.52 ಲಕ್ಷ ಕೋಟಿ ರೂ.ಗಳಷ್ಟು ಕೊರೆದುಹೋಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 4,664 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 617 ಕಂಪೆನಿಗಳು ಮುನ್ನಡೆ ಸಾಧಿಸಿದವು; 4,047 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 49 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.