ಮುಂಬಯಿ: ಕೋವಿಡ್ 19 ಸೋಂಕು ಪ್ರಕರಣದ ಹೆಚ್ಚಳದ ಹಿನ್ನೆಲೆಯಲ್ಲಿ ಜಾಗತಿಕ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಅದರಂತೆ ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಶುಕ್ರವಾರ(ಮಾರ್ಚ್ 19) ಮತ್ತೆ 600 ಅಂಕಗಳಷ್ಟು ಭಾರೀ ಕುಸಿತ ಕಂಡಿದೆ.
ಇದನ್ನೂ ಓದಿ:ಸಚಿವ ಸುಧಾಕರ್ ಮನೆಮುಂದೆ ರಸ್ತೆಯಲ್ಲೇ ಗನ್ ಮ್ಯಾನ್- ಡ್ರೈವರ್ ಹೊಡೆದಾಟ!
ಶುಕ್ರವಾರ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 617.10 ಅಂಕ ಇಳಿಕೆಯಾಗಿದ್ದು 48,599.42 ಅಂಕಕ್ಕೆ ಕುಸಿತ ಕಂಡಿದೆ. ಎನ್ ಎಸ್ ಇ ನಿಫ್ಟಿ ಕೂಡಾ 201.35 ಅಂಕ ಇಳಿಕೆಯಾಗಿದ್ದು, 14,356.50ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಕುಸಿತದಿಂದ ಒಎನ್ ಜಿಸಿ, ಎಲ್ ಆ್ಯಂಡ್ ಟಿ, ಬಜಾಜ್ ಫೈನಾನ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಎಸ್ ಬಿಐ, ಟೈಟಾನ್, ಎಚ್ ಡಿಎಫ್ ಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.5ರಷ್ಟು ನಷ್ಟ ಅನುಭವಿಸಿದೆ.
ಏತನ್ಮಧ್ಯೆ ಕೋಟಕ್ ಬ್ಯಾಂಕ್, ಭಾರ್ತಿ ಏರ್ ಟೆಲ್ ಮತ್ತು ಪವರ್ ಗ್ರಿಡ್ ಸೇರಿದಂತೆ ಕೆಲವು ಷೇರುಗಳು ಲಾಭ ಗಳಿಸಿದೆ.ಗುರುವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 586.10 ಅಂಕಗಳ ಕುಸಿತ ದಾಖಲಿಸಿ 49,216.52 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಕುಡಾ 14,557.85 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.