Advertisement

553 ಪಾಯಿಂಟ್‌ ಏರಿದ ಷೇರು ಮಾರುಕಟ್ಟೆ

11:09 PM Jun 03, 2019 | Team Udayavani |

ಮುಂಬಯಿ: ಆರ್‌ಬಿಐ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಹಾಗೂ ಹೊಸ ಸರಕಾರ ನೂತನ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿಂದ ಮುಂಬಯಿ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಸೋಮವಾರ ಬಿಎಸ್‌ಇ ಸೆನ್ಸೆಕ್ಸ್‌ 553 ಪಾಯಿಂಟ್‌ ಏರಿಕೆ ಕಂಡು 40,267.52ಕ್ಕೆ ತಲುಪಿದೆ. ಇನ್ನೊಂದೆಡೆ ನಿಫ್ಟಿ 12,088.55ಕ್ಕೆ ತಲುಪಿದ್ದು, 166 ಪಾಯಿಂಟ್‌ ಏರಿಕೆ ಕಂಡಿದೆ. ಎರಡೂ ಸೂಚ್ಯಂಕಗಳು ದಿನದ ವಹಿವಾಟಿನಲ್ಲಿ 40,308 ಹಾಗೂ 12,103 ವರೆಗೆ ತಲುಪಿತ್ತು.

Advertisement

ವಿಶ್ವದ ಇತರ ಮಾರುಕಟ್ಟೆಗಳು ಕುಸಿತ ಕಾಣುತ್ತಿದ್ದರೂ ಭಾರತದ ಮಾರುಕಟ್ಟೆ ಏರುಗತಿಯಲ್ಲಿ ಸಾಗಿದೆ. ಕಚ್ಚಾ ತೈಲ ಬೆಲೆ ಇಳಿಕೆ, ವಿದೇಶಿ ಹಣಕಾಸು ಒಳಹರಿವು ಹೆಚ್ಚಿರುವುದು ಕೂಡ ಇದಕ್ಕೆ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಅನಂತರ ಇನ್ನಷ್ಟು ಆರ್ಥಿಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಮಾರುಕಟ್ಟೆಯಲ್ಲಿ ಮೂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಚ್‌ಡಿಎಫ್ಸಿ, ರಿಲಯನ್ಸ್‌ ಹಾಗೂ ಟಿಸಿಎಸ್‌ ಷೇರುಗಳ ಭಾರಿ ಏರಿಕೆಯಿಂದಾಗಿ ಇಡೀ ಮಾರುಕಟ್ಟೆ ಚೇತರಿಕೆ ಕಂಡಿದೆ. ಹೀರೋ ಮೋಟೋಕಾರ್ಪ್‌ ಶೇ. 6.01ರಷ್ಟು ಏರಿದೆ.

ಇನ್ನೊಂದೆಡೆ ರೂಪಾಯಿ ಮೌಲ್ಯವೂ ಚೇತರಿಕೆ ಕಂಡಿದ್ದು, ಅಮೆರಿಕದ ಡಾಲರ್‌ ವಿರುದ್ಧ 69.26ಕ್ಕೆ ತಲುಪಿದೆ. ಸೋಮ ವಾರ 44 ಪೈಸೆ ಕುಸಿತವನ್ನು ರೂಪಾಯಿ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next