ಮುಂಬಯಿ : ಕಳೆದ ಮೂರು ದಿನಗಳಿಂದ ನಿರಂತರ ಲಾಭದ ಹಾದಿಯಲ್ಲಿ ಸಾಗಿ ಬಂದು ದಿನನಿತ್ಯ ಹೊಸ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ವಹಿವಾಟನ್ನು 72.46 ಅಂಕಗಳ ನಷ್ಟದೊಂದಿಗೆ 34,771.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.00 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,700.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದೇಶದ ವಿತ್ತೀಯ ಕೊರತೆ ಡಿಸೆಂಬರ್‌ನಲ್ಲಿ (ಆಮದು ಮತ್ತು ರಫ್ತು ನಡುವಿನ ಅಂತರ) 14.88 ಶತಕೋಟಿ ಡಾಲರ್ ತಲುಪಿರುವುದು ಶೇರು ಮಾರುಕಟ್ಟೆಯ ತಲ್ಲಣಕ್ಕೆ ಕಾರಣವಾಗಿದೆ. 2016ಕ್ಕೆ ಹೋಲಿಸಿದರೆ 2017ರ ವಿತ್ತೀಯ ಕೊರತೆ ಶೇ.41ರಷ್ಟು ಹೆಚ್ಚಿರುವುದು ಕಳವಳಕಾರಿಯಾಗಿದೆ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಮಂಗಳವಾರ ವಹಿವಾಟಿಗೆ ಒಳಪಟ್ಟ ಶೇರುಗಳು 3,091; ಇವುಗಳಲ್ಲಿ ಮನ್ನಡೆ ಕಂಡವುಗಳು 749: ಹಿನ್ನಡೆಗೆ ಗುರಿಯಾದವುಗಳು 2,223; ಬದಲಾವಣೆ ಕಾಣದೆ ಉಳಿದವುಗಳು 119 ಶೇರುಗಳು.
ಇಂದಿನ ಟಾಪ್ ಗೇನರ್‌ಗಳು : ವಿಪ್ರೋ, ಎಚ್‌ಸಿಎಲ್ ಟೆಕ್, ಇನ್‌ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರ; ಟಾಪ್ ಲೂಸರ್‌ಗಳು : ಕೋಲ್ ಇಂಡಿಯಾ, ಟಾಟಾ ಪವರ್, ಎಚ್‌ಪಿಸಿಎಲ್, ಬಜಾಜ್ ಫೈನಾನ್ಸ್, ರಿಲಯನ್ಸ್.