ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 70 ಅಂಕಗಳ ಕುಸಿತಕ್ಕೆ ಗುರಿಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27 ಅಂಕಗಳ ಕುಸಿತವನ್ನು ಅನುಭವಿಸಿತು.
ಅಮೆರಿಕ – ಚೀನ ವಾಣಿಜ್ಯ ಸಮರ ಉಲ್ಬಣಿಸುತ್ತಿರುವ ಕಾರಣ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಹಿನ್ನಡೆಯನ್ನು ಮುಂಬಯಿ ಶೇರು ಪೇಟೆ ಕೂಡ ಇಂದು ಅನುಸರಿಸಿತು.
ಹಾಗಿದ್ದರೂ ಬೆಳಗೆ 10.45ರ ಸುಮಾರಿಗೆ ಕೊಂಚ ಮಟ್ಟಿನ ಚೇತರಿಕೆ ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 68.71 ಅಂಕಗಳ ಏರಿಕೆಯನ್ನು ದಾಖಲಿಸಿ 37,531.70 ಅಂಕಗಳ ಮಟ್ಟಕ್ಕೆ ಜಿಗಿಯಿತು. ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 5.50 ಅಂಕಗಳ ಏರಿಕೆಯೊಂದಿಗೆ 11,284.40 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬೆಳಗ್ಗಿನ ಆರಂಭಿಕ ವಹಿವಟಿನಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 295 ಶೇರುಗಳು ಮುನ್ನಡೆ ಸಾಧಿಸಿದವು; 398 ಶೇರುಗಳು ಹಿನ್ನಡೆಗೆ ಗುರಿಯಾದವು; 46 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಹಿಂಡಾಲ್ಕೊ, ಈಶರ್ ಮೋಟರ್, ಡಾ. ರೆಡ್ಡಿ, ಗ್ರಾಸಿಂ ಇಂಡಸ್ಟ್ರೀಸ್ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್; ಟಾಪ್ ಲೂಸರ್ ಗಳು : ಟಿಸಿಎಸ್, ಎಸ್‌ಬಿಐ, ವಿಪ್ರೋ, ಎಚ್ ಸಿ ಎಲ ಟೆಕ್ ಮತ್ತು ಟೆಕ್ ಮಹೀಂದ್ರ.