Advertisement

ಅಮೆರಿಕ, ಚೀನಾ ಟ್ರೇಡ್ ವಾರ್! ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಭಾರೀ ಕುಸಿತ

10:04 AM Sep 05, 2019 | Nagendra Trasi |

ನವದೆಹಲಿ: ಹಣಕಾಸು ಮತ್ತು ಆಟೋ ಸ್ಟಾಕ್ಸ್ ಭಾರೀ ಮಾರಾಟದ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮಧ್ಯಾಹ್ನದ ವೇಳೆ 603 ಅಂಕಗಳ ಭಾರೀ ಕುಸಿತದೊಂದಿಗೆ 36,731 ಅಂಕಗಳ ವಹಿವಾಟು ಕಂಡಿದೆ.

Advertisement

ಅಲ್ಲದೇ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 176 ಅಂಕಗಳ ನಷ್ಟದೊಂದಿಗೆ 10, 847 ಅಂಕಗಳ ವಹಿವಾಟು ನಡೆಸಿದೆ. ಅಮೆರಿಕ, ಚೀನಾ ನಡುವಿನ ವಹಿವಾಟಿನ ಸಂಘರ್ಷದಿಂದಾಗಿ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಮತ್ತು ನಿಫ್ಟಿ ವಹಿವಾಟಿನ ಆರಂಭದಲ್ಲೇ ದುರ್ಬಲಗೊಂಡಿತ್ತು.

ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ, ಟಾಟಾ ಸ್ಟೀಲ್, ಒಎನ್ ಜಿಸಿ, ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್ ಶೇರುಗಳು ಶೇ.3.28ರಷ್ಟು ಕುಸಿತ ಕಂಡಿದೆ.

ಭಾನುವಾರ ವಿಶ್ವದ ದೊಡ್ಡಣ್ಣ ಅಮೆರಿಕ ಚೀನಾದ ವಿವಿಧ ವಸ್ತುಗಳ ಮೇಲೆ ಶೇ.15ರಷ್ಟು ಸುಂಕ ವಿಧಿಸಿತ್ತು. ಇದಕ್ಕೆ ಪ್ರತೀಯಾಗಿ ಚೀನಾ ಅಮೆರಿಕದ ಕಚ್ಛಾ ತೈಲದ ಮೇಲೆ ಹೊಸ ತೆರಿಗೆಯನ್ನು ಹೇರಿತ್ತು. ಇದರಿಂದಾಗಿ ಉಭಯ ರಾಷ್ಟ್ರಗಳ ವಹಿವಾಟಿನ ಸಂಘರ್ಷ ಮುಂದುವರಿದಂತಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next