ಮುಂಬಯಿ : 2019-20ರ ಹಣಕಾಸು ವರ್ಷದ ಮೊದಲ ದ್ವೆ„ಮಾಸಿಕ ವಿತ್ತ ನೀತಿಯನ್ನು ಆರ್ ಬಿ ಐ ಇಂದು ಗುರುವಾರ ಪ್ರಕಟಿಸಲಿದ್ದು ಅದಕ್ಕೆ ಪೂರ್ವಭಾವಿ ಎಂಬಂತೆ ಮುಂಬಯಿ ಶೇರು ಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಎಚ್ಚರಿಕೆಯ ನಡೆ ಇರಿಸಿತು.
ಬೆಳಗ್ಗೆ 10.45 ರ ಸುಮಾರಿಗೆ ಸೆನ್ಸೆಕ್ಸ್ 71.90 ಅಂಕಗಳ ನಷ್ಟದೊಂದಿಗೆ 38,805.22 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.50 ಅಂಕಗಳ ನಷ್ಟದೊಂದಿಗೆ 11,622.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ಇಂಡಿಯಾ ಬುಲ್ಸ್ ಹೌಸಿಂಗ್, ಅಲ್‌ಟ್ರಾ ಟೆಕ್ ಸಿಮೆಂಟ್, ಟೈಟಾನ್ ಕಂಪೆನಿ, ಟಾಟಾ ಮೋಟರ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿ ಟಾಪ್ ಗೇನರ್ ಆಗಿದ್ದವು.
ಇದೇ ವೇಳೆ ಎಚ್ ಸಿ ಎಲ್ ಟೆಕ್ , ಯುಪಿಎಲ್, ಹಿಂಡಾಲ್ಕೊ, ಎಸ್ ಬ್ಯಾಂಕ್, ಅದಾನಿ ಪೋರ್ಟ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 25 ಪೈಸೆಗಳ ಕುಸಿತ ಕಂಡು 68.66 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.