Advertisement

ನಿಸ್ತೇಜ ವಹಿವಾಟು : ಮುಂಬಯಿ ಶೇರು 36 ಅಂಕ ನಷ್ಟ

04:23 PM Oct 31, 2017 | udayavani editorial |

ಮುಂಬಯಿ : ಏಶ್ಯನ್‌ ಮಾರುಕಟ್ಟೆಗಳಲ್ಲಿನ ನಿಸ್ತೇಜತೆಯನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 36.11 ಅಂಕಗಳ ನಷ್ಟದೊಂದಿಗೆ 33,230.05 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 24.50 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,339.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,368 ಶೇರುಗಳು ಮುನ್ನಡೆ ಕಂಡವು; 1,304 ಶೇರುಗಳು ಹಿನ್ನಡೆಗೆ ಗುರಿಯಾದವು; 146 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

ಇಂದಿನ ಟಾಪ್‌ ಗೇನರ್‌ಗಳು : ಎಕ್ಸಿಸ್‌ ಬ್ಯಾಂಕ್‌, ಭಾರ್ತಿ ಇನ್‌ಫ್ರಾಟೆಲ್‌, ಒಎನ್‌ಜಿಸಿ, ಎಚ್‌ಸಿಎಲ್‌ ಟೆಕ್‌, ಬಿಪಿಸಿಎಲ್‌.

ಟಾಪ್‌ ಲೂಸರ್‌ಗಳು : ಯುಪಿಎಲ್‌, ವೇದಾಂತ, ಇನ್‌ಫೋಸಿಸ್‌, ಗೇಲ್‌, ಮಹಿಂದ್ರ. 

Advertisement
Advertisement

Udayavani is now on Telegram. Click here to join our channel and stay updated with the latest news.

Next