ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರ ದೃಷ್ಟಿ ಈಗ ಕೇಂದ್ರ ಬಜೆಟ್ ಮೇಲೆ ಕೇಂದ್ರೀಕೃತವಾಗಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ ತೋರಿ ಬರುತ್ತಿದ್ದು ಆ ಪ್ರಕಾರ ಇಂದು ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 22.77 ಅಂಕಗಳ ಅಲ್ಪ ಏರಿಕೆಗೆ ಸೀಮಿತವಾಗಿ ದಿನದ ವಹಿವಾಟನ್ನು 39,934.99 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.45 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,916.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಟಾಪ್ ಗೇನರ್‌ಗಳ ಪೈಕಿ ಇಂಡಸ್ ಇಂಡ್ ಬ್ಯಾಂಕ್, ಐಟಿಸಿ, ಎಲ್ ಆ್ಯಂಡ್ ಟಿ, ಮಹೀಂದ್ರ, ಪವರ್ ಗ್ರಿಡ್, ಏಶ್ಯನ್ ಪೇಂಟ್, ಎಸ್‌ಬಿಐ ಶೇರುಗಳು ಶೇ.3.79ರ ಏರಿಕೆಯನ್ನು ದಾಖಲಿಸಿ ಮಿಂಚಿದವು.
ಟಾಪ್ ಲೂಸರ್‌ಗಳ ಪೈಕಿ ಟೆಕ್ ಮಹೀಂದ್ರ, ವೇದಾಂತ, ಇನ್‌ಫೋಸಿಸ್, ಎಸ್ ಬ್ಯಾಂಕ್, ಟಾಟಾ ಮೋಟರ್, ಟಿಸಿಎಸ್, ಎಚ್ ಸಿ ಎಲ್ ಟೆಕ್, ಮಾರುತಿ ಶೇರುಗಳು ಶೇ.1.44ರ ನಷ್ಟಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,652 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,295 ಶೇರುಗಳು ಮುನ್ನಡೆ ಸಾಧಿಸಿದವು; 1,195 ಶೇರುಗಳು ಹಿನ್ನಡೆಗೆ ಗುರಿಯಾದವು; 162 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.