ಮುಂಬಯಿ : ದಿನಪೂರ್ತಿ ಏಳುಬೀಳುಗಳನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಕೆಳಮಟ್ಟಕ್ಕೆ ಜಾರುವ ಮೂಲಕ ಇಂದು ಮಂಗಳವಾರದ ವಹಿವಾಟನ್ನು ನಿರಾಶಾದಾಯಕವಾಗಿ ಸಮಾಪನಗೊಳಿಸಿದವು.
ಎಸ್ ಬ್ಯಾಂಕ್ ಶೇರು ಧಾರಣೆ ಇಂದು ಶೇ.30ರಷ್ಟು ಕುಸಿದದ್ದೇ ಇಂದಿನ ಮಹತ್ತರ ವಿದ್ಯಮಾನ ಎನಿಸಿಕೊಂಡಿತು.
ಸೆನ್ಸೆಕ್ಸ್ ಇಂದು 35.78 ಅಂಕಗಳ ನಷ್ಟದೊಂದಿಗೆ 39,031.55 ಅಂಕಗಳ ಮಟ್ಟಕ್ಕೆ ಕುಸಿದರೆ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.06 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,748.15 ರೂ. ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಟಾಪ್ ಲೂಸರ್‌ಗಳಾದ ಇಂಡಸ್‌ಇಂಡ್ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಮಾರುತಿ ಸುಜುಕಿ, ಪವರ್ ಗ್ರಿಡ್, ಮಹೀಂದ್ರ ಶೇರುಗಳು ಶೇ.5.21ರಷ್ಟು ಕುಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,686 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ ಕೇವಲ 725 ಶೇರುಗಳು ಮುನ್ನಡೆ ಸಾಧಿಸಿದವು; 1.789 ಶೇರುಗಳು ಹಿನ್ನಡೆಗೆ ಗುರಿಯಾದವು; 172 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.