ಮುಂಬಯಿ : ವಾರದ ಇಂದಿನ ಆರಂಭದ ದಿನಕ್ಕೆ ಶೇರು ಸೂಚ್ಯಂಕಗಳು ಧನಾತ್ಮಕ ಆರಂಭವನ್ನು ನೀಡಿವೆ. ಸೆನ್ಸೆಕ್ಸ್, ನಿಫ್ಟಿ, ದಿನಾಂತ್ಯದ ದಾಖಲೆ ಮಟ್ಟದ ಎತ್ತರವನ್ನು ತಲುಪಿದುದು ಇಂದಿನ ವಹಿವಾಟಿನ ವಿಶೇಷವೆನಿಸಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 108.94 ಅಂಕಗಳ ಮುನ್ನಡೆಯೊಂದಿಗೆ 33,266.16 ಅಂಕಗಳ ಮಟ್ಟಕ್ಕೇರುವ ಮೂಲಕ ಕೊನೆಗೊಳಿಸಿತು.
ಇದೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.70 ಅಂಕಗಳ ಮುನ್ನಡೆಯೊಂದಿಗೆ 10,363.70 ಅಂಕಗಳ ಮಟ್ಟವನ್ನು ತಲುಪಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,696 ಶೇರುಗಳು ಮುನ್ನಡೆ ಕಂಡರೆ, 1,032 ಶೇರುಗಳು ಹಿನ್ನಡೆಗೆ ಗುರಿಯಾದವು. 148 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಟಾ ಮೋಟರ್ ಡಿವಿಆರ್, ಲೂಪಿನ್, ಭಾರ್ತಿ ಇನ್‌ಫ್ರಾಟೆಲ್, ಎಸ್ ಬ್ಯಾಂಕ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು. ಎಚ್‌ಯುಎಲ್, ಐಟಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್ ಶೇರುಗಳು ಟಾಪ್ ಲೂಸರ್ ಎನಿಸಿದವು.