ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ನಿರಂತರ ಐದನೇ ದಿನದ ವಹಿವಾಟಿನಲ್ಲಿ 324 ಅಂಕಗಳ ನಷ್ಟಕ್ಕೆ ಗುರಿಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 100ಕ್ಕೂ ಅಧಿಕ ಅಂಕಗಳನ್ನು ಕಳೆದು ಕೊಂಡಿತು.
ಅಮೆರಿಕ – ಚೀನ ವಾಣಿಜ್ಯ ಮಾತುಕತೆ ಬಿಕ್ಕಟ್ಟು ಇನ್ನೂ ಮುಂದುವರಿದಿರುವುದು ಮತ್ತು ಕಾರ್ಪೊರೇಟ್ ಫಲಿತಾಂಶ ನಿರುತ್ತೇಜಕವಾಗಿರುವುದೇ ಮುಂಬಯಿ ಶೇರು ಮಾರುಕಟ್ಟೆಯ ಇಂದಿನ ಕುಸಿತಕ್ಕೆ ಕಾರಣವಾಗಿದೆ.
ಇಂದಿನ ಟಾಪ್ ಲೂಸರ್‌ಗಳ ಪೈಕಿ ಮುಖ್ಯವೆನಿಸಿದ ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು ಶೇ.4.60 ಕುಸಿತಕ್ಕೆ ಗುರಿಯಾದವು.
ದಿನದ ವಹಿವಾಟನ್ನು ಸೆನ್ಸೆಕ್ಸ್ 38,276.63 ಅಂಕಗಳ ಮಟ್ಟದಲ್ಲೂ ನಿಫ್ಟಿ 11,497.45 ಅಂಕಗಳ ಮಟ್ಟದಲ್ಲೂ ಕೊನೆಗೊಳಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,669 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 851 ಶೇರುಗಳು ಮುನ್ನಡೆ ಸಾಧಿಸಿದವು; 1,678 ಶೇರುಗಳು ಹಿನ್ನಡೆಗೆ ಗುರಿಯಾದವು; 140 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.