Advertisement

ಎನ್‌ಡಿಎ ಬೃಹತ್‌ ಲೀಡ್‌: ಮುಂಬಯಿ ಶೇರು 900ಕ್ಕೂ ಅಧಿಕ ಅಂಕ ಜಂಪ್‌

04:42 PM May 24, 2019 | Sathish malya |

ಮುಂಬಯಿ : 2019ರ ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು ಗುರುವಾರ ನಡೆಯುತ್ತಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ 335 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 900ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಶೇ.2ರ ಏರಿಕೆಯನ್ನು ದಾಖಲಿಸಿ 11,969 ಅಂಕಗಳ ಮಟ್ಟಕ್ಕೆ ಜಿಗಿಯಿತು.

ನಿನ್ನೆ ಬುಧವಾರದ ವಹಿವಾಟನ್ನು ಸೆನ್ಸೆಕ್‌ 140.41 ಅಂಕಗಳ ಏರಿಕೆಯೊಂದಿಗೂ ನಿಫ್ಟಿ 28.80 ಅಂಕಗಳ ಏರಿಕೆಯೊಂದಿಗೆ 11,737.90 ಅಂಕಗಳ ಮಟ್ಟದಲ್ಲೂ ಕೊನೆಗೊಳಿಸಿದ್ದವು.

ಡಾಲರ್‌ ಎದುರು ರೂಪಾಯಿ ಇಂದು 26 ಪೈಸೆಗಳ ಏರಿಕೆಯನ್ನು ದಾಖಲಿಸಿ 69.40 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಇಂದು ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್‌ 835.94 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 39,946.15 ಅಂಕಗಳ ಮಟ್ಟದಲ್ಲೂ ನಿಫ್ಟಿ 244.10 ಅಂಕಗಳ ಮುನ್ನಡೆಯೊಂದಿಗೆ 11,982.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

Advertisement

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಟಾಪ್‌ ಗೇನರ್‌ ಗಳಾಗಿ ಮೂಡಿ ಬಂದ ಇಂಡಸ್‌ ಇಂಡ್‌ ಬ್ಯಾಂಕ್‌, ಎಸ್‌ಬಿಐ, ಎಲ್‌ ಆ್ಯಂಡ್‌ ಟಿ, ಪವರ್‌ ಗ್ರಡ್‌, ಎಸ್‌ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಆರ್‌ಐಎಲ್‌, ಎಚ್‌ ಡಿ ಎಫ್ ಸಿ, ಭಾರ್ತಿ ಏರ್‌ಟೆಲ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಶೇ.7ರ ಏರಿಕೆಯನ್ನು ದಾಖಲಿಸಿದವು.

ಏಶ್ಯದ ಇತರ ಶೇರು ಮಾರುಕಟ್ಟೆಗಳಾಗಿರುವ ಚೀನ, ಜಪಾನ್‌ ಮತ್ತು ಕೊರಿಯ ಇಂದು ಹಿನ್ನಡೆ ಕಂಡಿವೆ. ಬ್ರೆಂಟ್‌ ಕಚ್ಚಾ ತೈಲ ಶೇ.0.58ರ ಇಳಿಕೆಯನ್ನು ಕಂಡು ಬ್ಯಾರಲ್‌ ಗೆ 70.58 ಡಾಲರ್‌ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next