Advertisement

ಐಟಿ ಶೇರುಗಳ ಜಿಗಿತ : ಸೆನ್ಸೆಕ್ಸ್‌ 130 ಅಂಕ ಜಂಪ್‌, ನಿಫ್ಟಿ 45 ಅಂಕ ಏರಿಕೆ

03:00 PM Jul 03, 2019 | |

ಮುಂಬಯಿ : ತೈಲ ಮತ್ತು ಅನಿಲ, ಹಾಗೂ ಐಟಿ ಮತ್ತು ಹಣಕಾಸು ರಂಗದ ಶೇರುಗಳು ಮುನ್ನಡೆ ಸಾಧಿಸಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟಿನಲ್ಲಿ 129.98 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 39,816.48 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.70 ಅಂಕಗಳ ಏರಿಕೆಯನ್ನು ಕಂಡು ದಿನದ ವಹಿವಾಟನ್ನು 11,910.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಟಾಪ್‌ ಗೇನರ್‌ಗಳ ಪೈಕಿ ಒಎನ್‌ಜಿಸಿ, ಎಚ್‌ ಡಿ ಎಫ್ ಸಿ, ಭಾರ್ತಿ ಏರ್‌ಟೆಲ್‌, ಇನ್‌ಫೋಸಿಸ್‌, ಮಾರುತಿ, ಎಚ್‌ ಸಿ ಎಲ್‌ ಟೆಕ್‌, ಮಹೀಂದ್ರ, ಎಚ್‌ ಯು ಎಲ್‌, ಟೆಕ್ಕೆಮ್‌ ಮತ್ತು ಎಸ್‌ಬಿಐ ಶೇರುಗಳು ಶೇ.2.89ರ ಏರಿಕೆಯನ್ನು ದಾಖಲಿಸಿದವು.

ಎಸ್‌ ಬ್ಯಾಂಕ್‌ ಶೇರು ಇಂದು ಶೇ.7.60 ಕುಸಿತವನ್ನು ಕಂಡು ಟಾಪ್‌ ಲೂಸರ್‌ ಗಳ ಪೈಕಿ ಅಗ್ರಸ್ಥಾನಿಯಾಯಿತು. ಇತರ ಲೂಸರ್‌ಗಳಾಗಿ ಟಾಟಾ ಮೋಟರ್‌, ಸನ್‌ ಫಾರ್ಮಾ, ಇಂಡಸ್‌ ಇಂಡ್‌ ಬ್ಯಾಂಕ್‌, ಬಜಾಜ್‌ ಆಟೋ, ಎಕ್ಸಿಸ್‌ ಬ್ಯಾಂಕ್‌ ಕೋಟಕ್‌ ಬ್ಯಾಂಕ್‌, ಹೀರೋ ಮೊಟೋ ಕಾರ್ಪ್‌ ಶೇರಗಳು ಶೇ.2.47ರ ಕುಸಿತಕ್ಕೆ ಗುರಿಯಾದವು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,645 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,146 ಶೇರುಗಳು ಮುನ್ನಡೆ ಸಾಧಿಸಿದವು; 1,344 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next