ಮುಂಬಯಿ : ನಿರಂತರ ಮೂರನೇ ದಿನವೂ ತನ್ನ ಏರುಗತಿಯನ್ನು ಕಾಯ್ದುಕೊಂಡಿರುವ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 165.94 ಅಂಕಗಳ ಏರಿಕೆಯೊಂದಿಗೆ 39,950.46 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ,ಕ 42.90 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,965.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಾಗತಿಕ ಶೇರು ಪೇಟೆಗಳಲ್ಲಿ ದೃಢತೆ ಮತ್ತು ಹುರುಪು ಕಂಡು ಬಂದಿರುವುದೇ ಇಂದು ಮುಂಬಯಿ ಶೇರು ಪೇಟೆಯ ನಿರಂತರ 3ನೇ ದಿನದ ಜಿಗಿತಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಸೆನ್ಸೆಕ್ಸ್ 300 ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ಕಂಡಿತ್ತು. ನಿಫ್ಟಿ ಇಂದು ವಹಿವಾಟಿನ ನಡುವೆ 12,000.35 ಅಂಕಗಳ ಮಟ್ಟವನ್ನು ತಲುಪಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,710 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,131 ಶೇರುಗಳು ಮುನ್ನಡೆ ಸಾಧಿಸಿದವು; 1.428 ಶೇರುಗಳು ಹಿನ್ನಡೆಗೆ ಗುರಿಯಾದವು; 151 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.