ಮುಂಬಯಿ : ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಮುನ್ನೋಟ ದುರ್ಬಲವಾಗಿರುವುದು, ವಿದೇಶೀ ಬಂಡವಾಳದ ಹೊರ ಹರಿವು ನಿರಂತರವಾಗಿ ಸಾಗಿರುವುದು ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 207 ಅಂಕಗಳ ನಷ್ಟಕ್ಕೆ ಗುರಿಯಾಯಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,400 ಅಂಕಕ್ಕಿಂತ ಕೆಳಮಟ್ಟಕ್ಕೆ ಜಾರಿತು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿನ್ನೆ ಮುಚ್ಚಿದ್ದ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಬೆಳಗ್ಗೆ 10.16ರ ಹೊತ್ತಿಗೆ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಂಡು 34.24 ಅಂಕಗಳ ನಷ್ಟದೊಂದಿಗೆ 37,817.76 ಅಂಕಗಳ ಮಟ್ಟದಲ್ಲೂ ನಿಫ್ಟಿ ಸೂಚ್ಯಂಕ 6.60 ಅಂಕಗಳ ನಷ್ಟದೊಂದಿಗೆ 11,428.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 43 ಪೈಸೆಯಷ್ಟು ಕುಸಿದು ಹೊಸ ಸಾರ್ವಕಾಲಿಕ ತಳಮಟ್ಟವಾಗಿ 70.32 ರೂ. ಮಟ್ಟಕ್ಕೆ ಕುಸಿಯಿತು.
ಶೇರು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫಿನಾನ್ಸ್, ಕೋಟಕ್ ಮಹೀಂದ್ರ ಶೇರುಗಳು ಸಕ್ರಿಯವಾಗಿದ್ದವು.
ಟಾಪ್ ಗೇನರ್‌ಗಳು : ಗೇಲ್, ಬಜಾಜ್ ಫಿನಾನ್ಸ್, ಸಿಪ್ಲಾ, ಎಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ; ಟಾಪ್ ಲೂಸರ್‌ಗಳು : ವೇದಾಂತ, ಕೋಟಕ್ ಮಹೀಂದ್ರ, ಹಿಂಡಾಲ್ಕೋ, ಝೀ ಎಂಟರ್‌ಟೇನ್‌ಮೆಂಟ್, ಟಾಟಾ ಸ್ಟೀಲ್.