Advertisement

178 ಅಂಕ ಜಿಗಿದ ಮಂಬಯಿ ಶೇರು, 11,600 ಗಡಿ ದಾಟಿದ ನಿಫ್ಟಿ

12:24 PM Apr 06, 2019 | Sathish malya |

ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ವಹಿವಾಟು ಮಾತುಕತೆ ಫ‌ಲಪ್ರದವಾದೀತೆಂಬ ಆಶಾವಾದದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಧನಾತ್ಮಕತೆ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 177.51 ಅಂಕಗಳ ಉತ್ತಮ ಜಿಗಿತದೊಂದಿಗೆ 38,862.23 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.95 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,665.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್‌ ಶೇರು ಶೇ.3.36ರ ಜಿಗಿತವನ್ನು ಕಂಡು ಟಾಪ್‌ ಗೇನರ್‌ ಎನಿಸಿಕೊಂಡಿತು. ಇದನ್ನು ಅನುಸರಿಸಿದ ವೇದಾಂತ, ಬಜಾಜ್‌ ಫಿನಾನ್ಸ್‌, ಟಿಸಿಎಸ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಇನ್‌ಫೋಸಿಸ್‌, ಒಎನ್‌ಜಿಸಿ, ಕೋಟಕ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಮಹೀಂದ್ರ, ಐಟಿಸಿ ಶೇರುಗಳು ಉತ್ತಮ ಏರಿಕೆ ಕಂಡವು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,738 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,506 ಶೇರುಗಳು ಮುನ್ನಡೆ ಸಾಧಿಸಿದವು; 1,066 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next