ಮುಂಬಯಿ : ದಿನಪೂರ್ತಿ ಏಳು ಬೀಳಿನ ವಹಿವಾಟಿನಲ್ಲಿ 400 ಅಂಕಗಳ ಓಲಾಟವನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 174 ಅಂಕಗಳ ನಷ್ಟದೊಂದಿಗೆ 38,557.04 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,498.90 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ಅತೀ ದೊಡ್ಡ ಲೂಸರ್ ಬಜಾಜ್ ಫಿನಾನ್ಸ್ ಶೇ.4.91ರ ನಷ್ಟವನ್ನು ಅನುಭವಿಸಿತು. ಉಳಿದಂತೆ ಟಿಸಿಎಸ್, ಟಾಟಾ ಸ್ಟೀಲ್, ಟಾಟಾ ಮೋಟರ್, ಎಕ್ಸಿಸ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಹೀರೋ ಮೋಟೋ ಕಾರ್ಪ್, ಮಹೀಂದ್ರ, ಬಜಾಜ್ ಆಟೋ ಮತ್ತು ಎಸ್‌ಬಿಐ ಶೇರುಗಳು ಶೇ.2.94ರ ನಷ್ಟಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,584 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 946 ಶೇರುಗಳು ಮುನ್ನಡೆ ಸಾಧಿಸಿದವು; 1,496 ಶೇರುಗಳು ಹಿನ್ನಡೆಗೆ ಗುರಿಯಾದವು; 142 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.