ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ 210 ಅಂಕಗಳಷ್ಟು ಕುಸಿತ ಕಂಡಿದ್ದು, ತೈಲ, ಅನಿಲ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ನಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:‘ಪಾಕಿಸ್ತಾನ್ ಜಿಂದಾಬಾದ್’ ಎಂದವರು ರೈತ ಹೋರಾಟದಲ್ಲಿ ಭಾಗಿಯಾಗಿದ್ದಾರೆ: ಶೋಭಾ ಕರಂದ್ಲಾಜೆ
ಆರಂಭಿಕ ವಹಿವಾಟಿನಲ್ಲಿ ಬಿಎಸ್ ಇ ಬಾರೋಮೀಟರ್ ಷೇರುಮಾರಾಟದ ಒತ್ತಡಕ್ಕೆ ಸಿಲುಕಿದ ಪರಿಣಾಮ ಷೇರುವಹಿವಾಟಿನ ಮೇಲೆ ಹೊಡೆದ ಬಿದ್ದು 210.75 ಅಂಕಗಳಷ್ಟು ಕುಸಿತ ಕಂಡು 48,136.84 ಅಂಕಗಳ ವಹಿವಾಟು ನಡೆಸಿದೆ.
ಬಿಎಸ್ ಇ ರೀತಿ ನಿಫ್ಟಿ ಕೂಡಾ 62.50 ಅಂಕಗಳಷ್ಟು ಇಳಿಕೆಯೊಂದಿಗೆ 14,176.40 ಅಂಕಗಳ ವಹಿವಾಟಿನಲ್ಲಿ ಮುಂದುವರಿದಿದೆ. ಸೆನ್ಸೆಕ್ಸ್ ಕುಸಿತದಿಂದ ಇಂಡಸ್ ಲ್ಯಾಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಡಾ.ರೆಡ್ಡೀಸ್ ಏಷ್ಯನ್ ಪೈಂಟ್ಸ್, ಎನ್ ಟಿಪಿಸಿ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ನಷ್ಟ ಕಂಡಿವೆ.
ಕಳೆದ ಎರಡು, ಮೂರು ದಿನಗಳ ವಹಿವಾಟಿನಲ್ಲಿ ಬಿಎಸ್ ಇ ಸೆನ್ಸೆಕ್ಸ್ 1.444.52 ಅಂಕಗಳಷ್ಟು ಕುಸಿತ ಕಂಡಿದ್ದು, ಎನ್ ಎಸ್ ಇ ನಿಫ್ಟಿ 405.50 ಅಂಕಗಳಷ್ಟು ಕುಸಿತ ಕಂಡಿತ್ತು.