ಮುಂಬಯಿ : ದಿನಪೂರ್ತಿ ಭಾರೀ ಏಳು ಬೀಳುಗಳನ್ನುಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 87 ಅಂಕಗಳ ನಷ್ಟದೊಂದಿಗೆ 38,736.23 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.40 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,552.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ಟಾಪ್ ಲೂಸರ್‌ಗಳ ಪೈಕಿ ಬಜಾಜ್ ಫಿನಾನ್ಸ್, ಒಎನ್‌ಜಿಸಿ, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಎಲ್ ಆ್ಯಂಡ್ ಟಿ, ಎಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಎಚ್ ಡಿ ಎಫ್ ಸಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಶೇರುಗಳು ಶೇ.2.08ರ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ವೇದಾಂತ, ಸನ್ ಫಾರ್ಮಾ, ಟಾಟಾ ಸ್ಟೀಲ್, ಏಶ್ಯನ್ ಪೇಂಟ್, ಹೀರೋ ಮೋಟೋ ಕಾರ್ಪ್, ಎಸ್ ಬ್ಯಾಂಕ್ ಶೇರುಗಳು ಶೇ.2.44ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 13 ಪೈಸೆಗಳ ಹಿನ್ನಡೆಗೆ ಗುರಿಯಾಗಿ 68.57 ರೂ. ಮಟ್ಟಕ್ಕೆ ಇಳಿಯಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,594 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,190 ಶೇರುಗಳು ಮುನ್ನಡೆ ಸಾಧಿಸಿದವು; 1,254 ಶೇರುಗಳು ಹಿನ್ನಡೆಗೆ ಗುರಿಯಾದವು; 150 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.