Advertisement

ಸೆನ್ಸೆಕ್ಸ್‌ 531 ಅಂಕ ಕುಸಿತ

02:12 AM Jan 26, 2021 | Team Udayavani |

ಮುಂಬೈ: ಇಂಧನ ಮತ್ತು ಐಟಿ ಕ್ಷೇತ್ರಗಳ ಷೇರುಗಳ ಭಾರೀ ಮಾರಾಟವು ಸೆನ್ಸೆಕ್ಸ್‌ ಅನ್ನು ಸತತ 3ನೇ ದಿನವೂ ಕುಸಿಯುವಂತೆ ಮಾಡಿದೆ. ಜಾಗತಿಕ ಬೆಳವಣಿಗೆಗಳು ಹಾಗೂ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯ ಸುದ್ದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರಲಿಲ್ಲ. ಪರಿಣಾ ಮ ಮುಂಬೈ ಷೇರುಪೇಟೆಸಂವೇದಿ ಸೂಚ್ಯಂಕ ಸೋಮವಾರ 530.95 ಅಂಕ ಕುಸಿತ ದಾಖಲಿಸಿ, 48,347.59 ರಲ್ಲಿ ಅಂತ್ಯಗೊಂ ಡಿದೆ. ಇದೇ ವೇಳೆ, ನಿಫ್ಟಿ ಕೂಡ 133 ಅಂಕ ಕುಸಿದು, ದಿನಾಂತ್ಯಕ್ಕೆ 14,238. 90ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಕಳೆದ ಮೂರು ವಹಿವಾಟಿನ ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಒಟ್ಟಾರೆ 1,444.53 ಅಂಕಗಳಷ್ಟು ಪತನಗೊಂಡಿದ್ದರೆ, ನಿಫ್ಟಿ 405.80 ಅಂಕ ಕುಸಿದಿದೆ.

Advertisement

ಚಿನ್ನದ ದರ ಇಳಿಕೆ:  ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ 141 ರೂ. ಇಳಿಕೆಯಾಗಿ, 10 ಗ್ರಾಂಗೆ 48,509 ರೂ. ಆಗಿದೆ. ಬೆಳ್ಳಿ ದರ 43 ರೂ. ಹೆಚ್ಚಳವಾಗಿ, ಕೆಜಿಗೆ 66,019 ರೂ. ಆಗಿದೆ. ಇನ್ನು, ಡಾಲರ್‌ ಎದುರು ರೂಪಾಯಿ ಮೌಲ್ಯ 3 ಪೈಸೆ ಏರಿಕೆಯಾಗಿ, 72.94 ರೂ. ಆಗಿದೆ.

2020ರಲ್ಲಿ  ಎಫ್ಡಿಐ ಹೆಚ್ಚಳ :

ಕಳೆದ ವರ್ಷ ಭಾರತಕ್ಕೆ ಶೇ.13ರಷ್ಟು ಹೆಚ್ಚು ವಿದೇಶಿ ನೇರ ಬಂಡವಾಳ(ಎಫ್ಡಿಐ) ಹರಿದುಬಂದಿದೆ. ಕೊರೊನಾ ಸೋಂಕಿನಿಂದಾಗಿ ಅಮೆರಿಕ, ಯು.ಕೆ. ಮತ್ತು ರಷ್ಯಾದಂತಹ ದೇಶಗಳಲ್ಲಿ ಬಂಡವಾಳದ ಪ್ರಮಾಣವು ಗಣನೀಯವಾಗಿ ಕುಗ್ಗಿದ್ದರೆ, ಅದರ ಲಾಭವನ್ನು ಭಾರತ ಮತ್ತು ಚೀನಾ ಪಡೆದವು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಜಾಗತಿಕ ವಿದೇಶಿ ನೇರ ಬಂಡವಾಳದ ಪ್ರಮಾಣ ಶೇ.42ರಷ್ಟು ಕುಸಿದಿದೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ.13ರಷ್ಟು ಹೆಚ್ಚಳವಾಗಿದೆ  ಎಂದಿದೆ ವರದಿ.

Advertisement

Udayavani is now on Telegram. Click here to join our channel and stay updated with the latest news.

Next