Advertisement

ಸುಮಾರು 400 ಅಂಕ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್; ಲಾಭ, ನಷ್ಟ ಕಂಡ ಷೇರು ಯಾವುದು?

11:41 AM Apr 11, 2022 | Team Udayavani |

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಸೋಮವಾರ (ಏಪ್ರಿಲ್ 11) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಸುಮಾರು 400 ಅಂಕಗಳಷ್ಟು ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.

Advertisement

ಇದನ್ನೂ ಓದಿ:ಗುಜರಾತ್: ರಾಸಾಯನಿಕ ತಯಾರಿಕ ಕಾರ್ಖಾನೆಯಲ್ಲಿ ಸ್ಫೋಟ, 6 ಮಂದಿ ಸಜೀವ ದಹನ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 398.98 ಅಂಕಗಳಷ್ಟು ಇಳಿಕೆಯಾಗಿದ್ದು, 59,048.20 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 94.6 ಅಂಕ ಕುಸಿತವಾಗಿದ್ದು, 17,689.75 ಅಂಕಗಳಲ್ಲಿ ವಹಿವಾಟು ನಡೆಸಿದೆ.

ಸೆನ್ಸೆಕ್ಸ್, ನಿಫ್ಟಿ ಕುಸಿತದ ಪರಿಣಾಮ ಎಚ್ ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ವಿಪ್ರೋ, ಹಿಂದೂಸ್ತಾನ್ ಯುನಿಲಿವರ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ. ಅದೇ ರೀತಿ ಎನ್ ಟಿಪಿಸಿ, ಪವರ್ ಗ್ರಿಡ್ ಕಾರ್ಪೋರೇಶನ್, ಟಾಟಾ ಸ್ಟೀಲ್, ಎಸ್ ಬಿಐ ಷೇರುಗಳು ಲಾಭಗಳಿಸಿದೆ.

ಶುಕ್ರವಾರ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 412.23 ಅಂಕ ಏರಿಕೆಯೊಂದಿಗೆ 59,447.18 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 144.80 ಅಂಕ ಏರಿಕೆಯಾಗಿದ್ದು, 17, 784.35 ಅಂಕಗಳ ಮಟ್ಟ ತಲುಪಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next